ಪಿರಿಯಾಪಟ್ಟಣ: ತಾಲೂಕಿನ ಹಬಟೂರು ಕೊಪ್ಪಲು ಗ್ರಾಮದ ಬೈರೇಗೌಡ(66) ನಾಪತ್ತೆಯಾಗಿದ್ದಾರೆ.
ಜು.6 ರಂದು ಪಿರಿಯಾಪಟ್ಟಣಕ್ಕೆ ಹೋಗಿಬರುವುದಾಗಿ ಮನೆಯಿಂದ ತೆರಳಿದವರು ಮತ್ತೆ ಗ್ರಾಮಕ್ಕೆ ಹಿಂದಿರುಗಿ ಬಂದರು ಸಂಜೆಯಾದರೂ ಮನೆಗೆ ಬಂದಿರುವುದಿಲ್ಲ.ಪರಿಚಯಸ್ತರು ಹಾಗೂ ಸಂಬಂಧಿಕರ ಬಳಿ ಕೇಳಿದರು ಯಾವುದೇ ಮಾಹಿತಿ ಇಲ್ಲದ ಕಾರಣ ಅವರ ಪುತ್ರ ರವಿ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾದ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವ ಪೊಲೀಸರು ನಾಪತ್ತೆಯಾದ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತರೆ ಪಿರಿಯಾಪಟ್ಟಣ ಪೊಲೀಸ್ ಠಾಣೆ ದೂರವಾಣಿ 08223 – 273100 ಸಂಪರ್ಕಿಸುವಂತೆ ಇನ್ಸ್ಪೆಕ್ಟರ್ ಕೆ.ವಿ ಶ್ರೀಧರ್ ಕೋರಿದ್ದಾರೆ.