ನಾಪತ್ತೆಯಾಗಿದ್ದ ಅಪ್ರಾಪ್ತೆಯ ಮೃತದೇಹವು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೊಡಂಗಾಯಿ ಬಳಿಯ ಮೂರ್ಕಜೆ ಎಂಬಲ್ಲಿರುವ ಗುರುಕುಲದ ಕೆರೆಯಲ್ಲಿ ಪತ್ತೆಯಾಗಿದೆ. ಈಕೆ ಗುರುಕುಲವೊಂದರಲ್ಲಿ ಸಂಸ್ಕ್ರತ ಶಿಕ್ಷಣ ಪಡೆಯುತ್ತಿದ್ದಳು. ರವಿವಾರ ಸಂಜೆ ಬಾಲಕಿಯು ಶಾಲೆಯಲ್ಲಿ ಪತ್ರವೊಂದನ್ನು ಬರೆದಿಟ್ಟು ನಾಪತ್ತೆಯಾಗಿದ್ದು, ಈ ಬಗ್ಗೆ ಈಗಾಗಲೇ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 44/2026, ಕಲಂ: 137(2) BNS 2023 ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿತ್ತು. ಇಂದು ಬಾಲಕಿಯ ಮೃತದೇಹವು ಆಕೆ ಕಲಿಯುತ್ತಿದ್ದ ಗುರುಕುಲದ ಆವರಣದಲ್ಲಿರುವ ಕೆರೆಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಯುಡಿಆರ್: 03/2026 ಕಲಂ: 194(1) BNSS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



