ಹನೂರು: ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗಿ ಬರುತ್ತೇನೆ ಎಂದು ತೆರಳಿ ಹೋದ ಪತ್ನಿ ಸೆಲ್ವಿ ಇನ್ನು ಬಂದಿಲ್ಲವೆಂದು ಪತಿ ಲಕ್ಷ್ಮಯ್ಯ ಹನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹನೂರು ತಾಲೂಕಿನ ಚಂಗವಾಡಿ ಗ್ರಾಮದಿಂದ ಜುಲೈ 19 ರಂದು ಮಲೆಮಾದೇಶ್ವರ ಬೆಟ್ಟಕ್ಕೆ ಹೋಗಿ ಬರುತ್ತೇನೆ ಎಂದು ಹೋದವರು ಇನ್ನು ವಾಪಸ್ ಮನೆಗೆ ಬಂದಿರುವುದಿಲ್ಲ. ಈ ಸಂಬಂಧ ಸಂಬಂಧಿಕರ ಮನೆಯಲೆಲ್ಲ ಹುಡುಕಿದರೂ ಇನ್ನೂ ಪತ್ತೆಯಾಗಿಲ್ಲ ಆದ್ದರಿಂದ ಪತ್ನಿಯನ್ನು ಹುಡುಕಿ ಕೊಡುವಂತೆ ಪತಿ ಲಕ್ಷ್ಮಯ್ಯ ದೂರು ನೀಡಿದ್ದಾರೆ.
ಸೆಲ್ವಿ 45 ವರ್ಷ ವಯಸ್ಸಾಗಿದ್ದು ಸಾಧಾರಣ ಮೈಕಟ್ಟು ಕೆಂಪು ಬಣ್ಣದ ಸೀರೆ ಧರಿಸಿದ್ದು ಕನ್ನಡ ಮತ್ತು ತಮಿಳು ಮಾತನಾಡುತ್ತಾರೆ. ಇವರು ಎಲ್ಲಾದರೂ ಕಂಡು ಬಂದಲ್ಲಿ ಹನೂರು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08224268803 -9480804656 ಕರೆ ಮಾಡಿ ತಿಳಿಸುವಂತೆ ಎಎಸ್ಐ ಕೃಷ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.