Monday, April 21, 2025
Google search engine

Homeಸ್ಥಳೀಯಚಿಕ್ಕಕಾನ್ಯ ಬಳಿ ಹುಲಿ ಪ್ರತ್ಯಕ್ಷ ಸ್ಥಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ

ಚಿಕ್ಕಕಾನ್ಯ ಬಳಿ ಹುಲಿ ಪ್ರತ್ಯಕ್ಷ ಸ್ಥಳಕ್ಕೆ ಶಾಸಕ ಜಿ.ಟಿ.ದೇವೇಗೌಡ ಭೇಟಿ

ಮೈಸೂರು: ಸೂಕ್ತ ಕಾರ್ಯಚರಣೆ ಮೂಲಕ ಹುಲಿಯನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಜಿ.ಟಿ.ಡಿ. ಸೂಚಿಸಿದರು. ಜಯಪುರ ಹೋಬಳಿ ಸಿಂಧುವಳ್ಳಿ, ಬ್ಯಾತಹಳ್ಳಿ, ಚಿಕ್ಕಕಾನ್ಯ, ದೊಡ್ಡಕಾನ್ಯ ಗ್ರಾಮಗಳ ಮಧ್ಯದಲ್ಲಿ ಹುಲಿ ಕಾಣಿಸಿಕೊಂಡಿದ್ದು ಗ್ರಾಮಸ್ಥರು ರಾತ್ರಿ ವೇಳೆಯಲ್ಲಿ ಅನಾವಶ್ಯಕವಾಗಿ ಓಡಾಡದಂತೆ ಮನವಿ ಮಾಡಿದರು.

ಗ್ರಾಮಸ್ಥರು ಅನಾವಶ್ಯಕ ವದ್ದಂತಿಗಳಿಗೆ ಭಯಭೀತರಾಗದಂತೆ ಹಾಗೂ ಕಾರ್ಯಚರಣೆ ಮುಗಿಯುವ ವರೆಗೆ ಜನರು ಸಹಕರಿಸುವಂತೆ ತಿಳಿಸಿದರು. ಟಿ.ವಿ.ಎಸ್. ಕಂಪನಿಯ ನೌಕರರು ರಾತ್ರಿಪಾಳಿ ಮುಗಿಸಿ ಹೋಗಿವಾಗ ಎಚ್ಚರಿಕೆಯಿಂದ ಇರುವಂತೆ ತಿಳಿಸಿದರು. ಅರಣ್ಯ ಅಧಿಕಾರಿಗಳಿಗೆ ಅವಶ್ಯವಾದದನ್ನು ಒದಗಿಸಲು ಗ್ರಾಮ ಪಂಚಾಯತಿ ಪಿ.ಡಿ.ಓ.ಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಎ.ಸಿ.ಎಫ್. ಲಕ್ಷ್ಮಿಕಾಂತ್, ಆರ್.ಎಫ್.ಒ.ಸುರೇಂದ್ರ, ಸ್ಥಳೀಯ ಮುಖಂಡರಾದ ಗೆಜ್ಜಗಳ್ಳಿ ಲೋಕೇಶ್, ಕೃಷ್ಣ ಸಿಂಧುವಳ್ಳಿ, ಚಿಕ್ಕಕಾನ್ಯ ಮಹದೇವಸ್ವಾಮಿ, ಹಾರೋಹಳ್ಳಿ ಸುರೇಶ್ ಹಾಜರಿದ್ದರು.

RELATED ARTICLES
- Advertisment -
Google search engine

Most Popular