ಮಂಗಳೂರು (ದಕ್ಷಿಣ ಕನ್ನಡ): ಕಾಲವೆಂಬುವುದು ಹಾಗೆಯೇ ಸಿದ್ದರಾಮಯ್ಯನವರೇ. ತಲೆಯ ಮೇಲೆ ಸುರಿದ ನೀರು ಕಾಲ ಬುಡ ಸೇರಲೇ ಬೇಕು. 40% ನ ಸುಳ್ಳು ಆರೋಪ ಹೊರಿಸಿ ಅಧಿಕಾರಕ್ಕೆ ಬಂದ ನೀವು ಕಳಂಕ ಹೊತ್ತು ಕೆಳಗಿಳಿಯಲೇಬೇಕು.
ಅಮಾಯಕ ಜನರನ್ನು ನಂಬಿಸಿ ಸುಳ್ಳಿನ ಗ್ಯಾರಂಟಿಗಳ ಮೇಲೆ ನಿರ್ಮಿಸಿದ ನಿಮ್ಮ ಸಾಮ್ರಾಜ್ಯ ಕೆಲವೇ ದಿನಗಳಲ್ಲಿ ಛಿದ್ರವಾಗಲಿದೆ ಎಂದು ಮಂಗಳೂರು ನಗರದ ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ನಗರದಲ್ಲಿ ನಡೆದ ಸಿಎಂ ರಾಜೀನಾಮೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಕಿಡಿಕಾರಿದ್ದಾರೆ.
ಸರಕಾರಿ ಕೆಲಸ ದೇವರ ಕೆಲಸ ಎಂಬ ನಾಣ್ಣುಡಿ ಇದೆ. ಪಡೆಯುವ ಸಂಬಳಕ್ಕೆ ನಿರ್ವಹಿಸುವ ಕರ್ತವ್ಯ ದೇವರು ಮೆಚ್ಚುವಂತ್ತದ್ದಾಗಿರಬೇಕೆ ಹೊರತು ಇನ್ಯಾರನ್ನೋ ಮೆಚ್ಚಿಸಲು ಆಗಿರಬಾರದು ಎಂದು ಶಾಸಕ ಭರತ್ ಶೆಟ್ಟಿ ಪ್ರೊಟೆಸ್ಟ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದರು.