ಮಂಡ್ಯ: ಹೆಲ್ಮೆಟ್ ಇಲ್ಲದೆ ಗಾಡಿ ಓಡಿಸುತ್ತಿದ್ದವರಿಗೆ ಉಚಿತ ಹೆಲ್ಮೆಟ್ ನೀಡುವ ಮೂಲಕ ಶಾಸಕ ಗಣಿಗ ರವಿಕುಮಾರ್ ಜಾಗೃತಿ ಮೂಡಿಸಿದ್ದಾರೆ.
ಮಂಡ್ಯದ ಸಂಜಯ್ ವೃತ್ತದಲ್ಲಿ ಪೊಲೀಸ್ ಇಲಾಖೆ ಸಹಯೋಗದೊಂದಿಗೆ ಹೆಲ್ಮೆಟ್ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ಹೆಲ್ಮೆಟ್ ಧರಿಸದೆ ಬಂದವರಿಗೆ ಹೆಲ್ಮೆಟ್ ಕೊಟ್ಟು ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.
ಹೆಲ್ಮೆಟ್ ಧರಿಸದವರಿಗೆ ದಂಡದ ಬದಲಿಗೆ ಹೆಲ್ಮೆಟ್ ಖರೀದಿ ಮಾಡಲು ಸೂಚನೆ ನೀಡಲಾಯಿತು.
ದಂಡ ಹಾಕುವ ಬದಲು ಹೆಲ್ಮೆಟ್ ಖರೀದಿಸಿ ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿಕೊಳ್ಳಲು ಮನವಿ ಮಾಡಿದರು.
ಹೆಲ್ಮೆಟ್ ಹಾಕದೆ ನಿರ್ಲಕ್ಷ್ಯ ತೋರಿದರೆ ಗಾಡಿ ಸೀಜ್ ಮಾಡುವುದಾಗಿ ಎಚ್ಚರಿಕೆ ನೀಡಿ, ಉಚಿತವಾಗಿ ಹೆಲ್ಮೆಟ್ ಕೊಟ್ಟು ತಿಳಿ ಹೇಳಿದರು.
ಕಡ್ಡಾಯವಾಗಿ ಹೆಲ್ಮೆಟ್ ಧರಿಸಿ ಇಲ್ಲ ಗಾಡಿ ಸೀಜ್ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಮಗೆ ದುಡ್ಡು ಮುಖ್ಯವಲ್ಲ ಜೀವ ಮುಖ್ಯ. ದಂಡ ಹಾಕುವುದು ಸೂಕ್ತವಲ್ಲ ಬದಲಿಗೆ ಹೆಲ್ಮೆಟ್ ಖರೀದಿ ಮಾಡಿ ಹೆಲ್ಮೆಟ್ ಧರಿಸಿ. ಎಲ್ಲರು ಸಹ ಜಾಗೃತರಾಗಿ ನಮ್ಮ ಜೀವ ನಮ್ಮ ಕೈಯಲ್ಲಿದೆ. ಹೆಲ್ಮೆಟ್ ಧರಿಸಿಯೇ ಗಾಡಿ ಚಾಲನೆ ಮಾಡುವಂತೆ ಮನವಿ ಮಾಡಿದರು.