Monday, April 7, 2025
Google search engine

Homeರಾಜ್ಯಸುದ್ದಿಜಾಲರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾವಳಿಗೆ ಶಾಸಕ ಡಿ.ರವಿಶಂಕರ್ ...

ರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾವಳಿಗೆ ಶಾಸಕ ಡಿ.ರವಿಶಂಕರ್ ಚಾಲನೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ಗ್ರಾಮೀಣ ಕ್ರೀಡೆಯಾಗಿ ಖ್ಯಾತಿ ಪಡೆಯುತ್ತಿರುವ ಕಬ್ಬಡಿ ಕ್ರೀಡೆ ಬಗ್ಗೆ ಮಕ್ಕಳಲ್ಲಿ ಹೆಚ್ಚು ಆಸಕ್ತಿ ಮೂಡಿಸುವ ಕಾರ್ಯವಾಗಬೇಕೆಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಅವರು ತಾಲೂಕಿನ ಗಂಧನಹಳ್ಳಿ ಗ್ರಾಮದಲ್ಲಿ ಗಂಧನಹಳ್ಳಿ ಗ್ರಾಮದ ತಾಲ್ಲೂಕು ಕುರುಬರ ಸಂಘದ ಮಾಜಿ ಅಧ್ಯಕ್ಷ ದಿವಂಗತ ಜಿ.ಎನ್. ಮಲ್ಲೇಗೌಡರು, ಇವರ 2ನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಮೊದಲನೇ ವರ್ಷದ ರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾವಳಿ ಚಾಲನೇ ನೀಡಿ ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಪ್ರೀಮಿಯರ್ ಲೀಗ್ ಮೂಲಕ ಹೆಸರುವಾಸಿಯಾಗುತ್ತಿರುವ ಕಬ್ಬಡಿ ಬಗ್ಗೆ ಮಕ್ಕಳಲ್ಲಿಯೂ ಆಸಕ್ತಿ ಮೂಡಿಸಿ ಪ್ರೋತ್ಸಾಹ ನೀಡುವಂತಾದಲ್ಲಿ ಗ್ರಾಮೀಣ ಕ್ರೀಡೆಯಾದ ಕಬಡ್ಡಿಗೆ ಹೆಚ್ಚಿನ ಬೆಂಬಲ ದೊರಕಿದಂತಾಗುತ್ತದೆ ಎಂದರು.

ಆರಂಭದಲ್ಲಿ ಪ್ರೊ ಕಬಡ್ಡಿ ಲೀಗ್‌ಗೆ ಸಾಕಷ್ಟು ನಕಾರಾತ್ಮಕ ಕಾಮೆಂಟ್‌ಗಳು ಬಂದವು. ಹಳ್ಳಿಗಾಡಿನ ಆಟ ಹಾಗೆ, ಹೀಗೆ ಅಂತ ಕಾಲೆಳೆದಿದ್ದೂ ಆಗಿದೆ. ಆದರೆ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತಿರುವ ಪ್ರೊ ಕಬಡ್ಡಿ ಲೀಗ್ ಇವತ್ತು ಪ್ಯಾನ್ ಇಂಡಿಯಾ ಕ್ರೀಡೆಯಾಗಿದೆ. ಆರಂಭದಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಗ್ರಾಮೀಣ ಭಾಗದ ಕ್ರೀಡಾಪಟುಗಳನ್ನು ಗುರುತಿಸಿ ಲೀಗ್‌ಗೆ ಕರೆತರುವ ಪ್ರಯತ್ನನ್ನು ಆಯೋಜಕರು ಮಾಡುತ್ತಿದ್ದಾರೆ.

ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಇತ್ತೀಚೆಗೆ ಹೊಸ
ವಿನ್ಯಾಸವನ್ನು ಪಡೆದುಕೊಂಡು ಭಾರತೀಯರನ್ನು ಸೆಳೆಯುತ್ತಿದೆ. ಕ್ರಿಕೆಟ್‌ಗೆ ಸಮನಾಗಿರುವ ಕಬಡ್ಡಿ ಪಂದ್ಯ ವೀಕ್ಷಿಸುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ಉತ್ತಮ ಸ್ಥಾನ ಪಡೆದುಕೊಂಡಿದೆ

ಗಂಧನಹಳ್ಳಿ ಗ್ರಾಮ ಕಳೆದ ಹದಿನೈದು ವರ್ಷಗಳಿಂದ ಅಭಿವೃದ್ಧಿ ಕೆಲಸವಾಗದೇ ನೆನೆಗುದ್ದಿಗ ಬಿದ್ದಿದ್ದು ಇತ್ತೀಚಿಗೆ ‌ಸಿಮೆಂಟ್ ಕಾಂಕ್ರೀಟ್ ರಸ್ತೆ ಮಾಡಲಾಗಿದೆ, ಅದರಂತೆ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬ್ಯಾಂಕ್ ರಸ್ತೆ, ಗ್ರಾಮದ ಒಳ ರಸ್ತೆಗೆ ಅನುದಾನ ನೀಡಲಾಗಿದ್ದು ಮುಂದಿನ ದಿನಗಳಲ್ಲಿ ಕಾಮಗಾರಿಗೆ ಚಾಲನೇ ನೀಡಲಾಗುವುದು ಎಂದರು.

ಕೆರೆಕಟ್ಟೆಗಳಿಗೆ ನೀರು ತುಂಬಿಸಲು ಏತ ನೀರಾವರಿ ಯೋಜನೆಗೆ ಅನುದಾನ ಕೋರಲಾಗಿದೆ, ಅಲ್ಲದೆ ಗಂಧನಹಳ್ಳಿ ಗ್ರಾಮದ ಕನಕ ಭವನ ಮುಂದುವೆರದ ಕಾಮಗಾರಿಗೆ ಹಣ ಬಿಡುಗಡೆ ಮಾಡಿಸಲಾಗಿದೆ, ಕಪ್ಪಡಿ ಸೇತುವೆ ಕಾಮಗಾರಿಗೆ ಬಜೆಟ್ ನಲ್ಲಿ ಅನುಮೋದನೆ ದೊರೆತಿದ್ದು ಅದಷ್ಟು ಬೇಗ ಕಾಮಗಾರಿಗೆ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.

ತಾಲ್ಲೂಕು ಕುರುಬರ ಸಂಘವನ್ನು ಸಂಘಟಿಸಿ ಬೆಳಸಿ, ಸಮಾಜವನ್ನು ಒಗ್ಗೂಡಿಸಿ ಕೀರ್ತಿ ಸಂಘದ ಮಾಜಿ ಅಧ್ಯಕ್ಷರಾದ ದಿವಂಗತ ಮಲ್ಲೇಗೌಡರಿಗೆ ಸಲ್ಲುತ್ತದೆ, ಅವರ ಎರಡನೇ ವರ್ಷದ ಸವಿ ನೆನಪಿಗಾಗಿ ಗ್ರಾಮೀಣ ಕ್ರೀಡೆ ಕಬಡ್ಡಿ ಪಂದ್ಯಾವಳಿ ಅಯೋಜಿಸಿರುವುದು ಶ್ಲಾಘನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಮೊದಲನೇ ವರ್ಷದ ರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾವಳಿಗೆ ಶಾಸಕ.ಡಿ.ರವಿಶಂಕರ್ ಚಾಲನೇ ನೀಡಿದರು.

ರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾವಳಿಗೆ ರಾಜ್ಯದ ಮಂಗಳೂರು, ಮಂಡ್ಯ, ನಂಜನಗೂಡು, ಪಾಂಡುವಪುರ, ರಾಮನಾಥಪುರ, ಕೆ.ಆರ್.ನಗರ ಹಾಗೂ ಗಂಧನಹಳ್ಳಿ ಗ್ರಾಮದ ತಂಡಗಳು ಆಗಮಿಸಿದ್ದವು, ಕಬಡ್ಡಿ ಪಂದ್ಯಾವಳಿಯಲ್ಲಿ ಅಂಪೈರ್ ಗಳಾಗಿ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವೀಬಾಗದ ವಿನಯ್ ಕುಮಾರ್ .ಆರ್ , ಅಭಿಷೇಕ್ ಹೆಚ್.ಪಿ,, ಪ್ರಜ್ವಲ್ ಎಂ.ಪಿ, ಕಿರಣ್ ಯಶಸ್ವಿಯಾಗಿ ನಡೆಸಿ ಕೊಟ್ಟರು.

ಮೈಸೂರಿನ ಶ್ರೀನಿವಾಸ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ಹಾಗೂ ಕಾಂಗ್ರೆಸ್ ಮುಖಂಡ ಗಂಧನಹಳ್ಳಿ ವೆಂಕಟೇಶ್, ತಾ.ಪಂ.ಮಾಜಿ ಸದಸ್ಯ ಪಾಪುಮಂಜುನಾಥ್,
ಗ್ರಾಮದ ದೊಡ್ಡಯಜಮಾನ ಜಿ.ಎನ್..ರಘು, ಮುಖಂಡರಾದ ಪ್ರೇಮಶಿವಣ್ಣ, ಸಹಕಾರ ಸಂಘದ ಮಾಜಿ ನಿರ್ದೇಶಕ ಎಂಎಸ್ಐಎಲ್ ಹರೀಶ್, ಉದ್ಯಮಿ ಜಿ.ಎನ್. ಜಲೇಂದ್ರ, ರಾಜ್ಯ ಕಬಡ್ಡಿ ಮಾಜಿ ಆಟಗಾರ ಮಂಚನಹಳ್ಳಿ ಬಸವರಾಜು, ಡೈರಿ ಸಿಇಓ ಜಿ.ಕೆ.ಮಹದೇವ್, ಕಬಡ್ಡಿ ಪಂದ್ಯಾವಳಿ ಆಯೋಜಕರಾದ ಗಂಧನಹಳ್ಳಿ ಹೇಮಂತ್, ಜಿ.ಡಿ.ಅರುಣ್, ಕೆಂಪರಾಜು, ಅರಸ್ಸ್ ಮಂಜುನಾಥ್, ಜಿ.ಆರ್.ಹರೀಶ್, ಜಿಪಿಟಿ ಬೀರೇಶ್, ಮಂಜು, ದೇವೇಂದ್ರ, ಕಿಟ್ಟಿ, ಸುರ್ಜಿತ್ಅಪ್ಪು,ಜಿ.ಎಲ್.ಮರೀಗೌಡ, ಬಿರೇಶ್, ಮಂಜುರಾಮಣ್ಣ, ಅಭಿಮರೀಗೌಡ, ಅಂಗಡಿಮಧು,‌ಜಿ.ಆರ್.ಸುಮಂತ್ ಮೊದಲಾದವರು.ಇದ್ದರು.

೦೨) ಮೊದಲನೇ ವರ್ಷದ ರಾಜ್ಯ ಮಟ್ಟದ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾವಳಿಗೆ ಶಾಸಕ.ಡಿ.ರವಿಶಂಕರ್ ಚಾಲನೇ ನೀಡಿದರು.

RELATED ARTICLES
- Advertisment -
Google search engine

Most Popular