Saturday, April 19, 2025
Google search engine

Homeರಾಜ್ಯಸುದ್ದಿಜಾಲಅಮೃತ್-2.0 ಯೋಜನೆಯಡಿಯಲ್ಲಿ ಕೆ.ಆರ್.ನಗರದ ನೀರು ಸರಬರಾಜು ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ರವಿಶಂಕರ್ ಚಾಲನೆ

ಅಮೃತ್-2.0 ಯೋಜನೆಯಡಿಯಲ್ಲಿ ಕೆ.ಆರ್.ನಗರದ ನೀರು ಸರಬರಾಜು ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ರವಿಶಂಕರ್ ಚಾಲನೆ

ವರದಿ:ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ: ಭವಿಷ್ಯದ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಪಟ್ಟಣದ ೨೩ ವಾರ್ಡುಗಳಿಗೂ ಸಮರ್ಪಕವಾಗಿ ಕಾವೇರಿ ನದಿಯಿಂದ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಕಾರ್ಯಯೋಜನೆ ಹಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಕೆ.ಆರ್.ನಗರ ಪಟ್ಟಣದ ಹೊರವಲಯದಲ್ಲಿರುವ ಚಾಮರಾಜ ಒಡೆಯರ್ ನೀರು ಶುದ್ಧೀಕರಣ ಘಟಕದ ಆವರಣದಲ್ಲಿ ಅಮೃತ್-೨.೦ ಯೋಜನೆಯ ನೀರು ಸರಬರಾಜು ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು ೨೦೫೫ನೇ ಇಸವಿಯನ್ನು ಗಮನದಲ್ಲಿಟ್ಟುಕೊಂಡು ನೀರು ಸರಬರಾಜು ವ್ಯವಸ್ಥೆ ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ ಎಂದರು.

ಪ್ರಸ್ತುತ ರಾಜ್ಯ ಸರ್ಕಾರದಿಂದ ಅಮೃತ-೨.೦ ಯೋಜನೆಯಡಿ ೩೦.೧೫ ಕೋಟಿ ಅನುದಾನ ಮಂಜೂರಾಗಿದ್ದು, ಇಂದಿನಿoದಲೇ ಕಾಮಗಾರಿ ಆರಂಭವಾಗಿ ಮುಂದಿ ೧೮ ತಿಂಗಳೊಳಗೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದ ಅವರು ಈಗ ಪಟ್ಟಣದಲ್ಲಿ ೪೫ ಸಾವಿರ ಜನಸಂಖ್ಯೆಯಿದ್ದು, ೩೦ ವರ್ಷಗಳ ನಂತರ ೭೧ ಸಾವಿರ ಜನಸಂಖ್ಯೆ ವಾಸಿಸುವ ನಿರೀಕ್ಷೆಯಿದ್ದು, ಅವರೆಲ್ಲರಿಗೂ ಸದರಿ ಯೋಜನೆಯಿಂದ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.

ಪಟ್ಟಣದ ಕುಡಿಯುವ ನೀರಿನ ಸಮಸ್ಯೆಯನ್ನು ಅರಿತು ನಾನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮತ್ತು ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸಿದ್ದು, ನಮ್ಮ ಮನವಿಗೆ ಸ್ಪಂದಿಸಿದ ಸರ್ಕಾರಕ್ಕೆ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ನುಡಿದ ಶಾಸಕರು ನೀರು ಸರಬರಾಜು ಕೇಂದ್ರದಿoದ ಈಗ ೫.೬೭ ಎಂಎಲ್‌ಡಿ ನೀರು ಸರಬರಾಜಾಗುತ್ತಿದ್ದು, ಅಮೃತ ಯೋಜನೆ ಕಾಮಗಾರಿ ಪೂರ್ಣಗೊಂಡ ನಂತರ ಅದು ೧೩.೧೦ ಎಂಎಲ್‌ಡಿ ಸಾಮರ್ಥ್ಯಕ್ಕೇರಲಿದೆ ಎಂದು ವಿವರಿಸಿದರು.

ಪುರಸಭೆ ವ್ಯಾಪ್ತಿಯಲ್ಲಿರುವ ೨೩ ವಾರ್ಡುಗಳು ಮತ್ತು ಆ ವಾರ್ಡುಗಳ ಸುತ್ತ ಮುತ್ತ ಹೊಸದಾಗಿ ನಿರ್ಮಾಣವಾಗುತ್ತಿರುವ ಮನೆಗಳಿಗೂ ನಿತ್ಯ ಪ್ರತೀ ವ್ಯಕ್ತಿಗೆ ೧೩೫ ಲೀ ನೀರು ಸರಬರಾಜು ಮಾಡಲು ಉದ್ಧೇಶಿಸಲಾಗಿದ್ದು, ಇದರೊಂದಿಗೆ ಕೆ.ಆರ್.ನಗರ ಪಟ್ಟಣವನ್ನು ರಾಜ್ಯದಲ್ಲಿಯೇ ಮಾದರಿಯಾಗಿಸುವ ಕನಸು ಕಂಡಿರುವ ನಾನು ಅದನ್ನು ಕಾರ್ಯರೂಪಕ್ಕೆ ತರುತ್ತೇನೆ ಎಂದು ಘೋಷಿಸಿದರು.

ಇದರ ಜತೆಗೆ ನಗರಾಭಿವೃದ್ಧಿ ಇಲಾಖೆಯ ವತಿಯಿಂದ ಒಳಚರಂಡಿ ಕಾಮಗಾರಿಗೆ ೨೦ ಕೋಟಿ ಹಣ ಬಿಡುಗಡೆಯಾಗಿ, ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಜತೆಗೆ ಅಗತ್ಯವಿರುವೆಡೆ ಮತ್ತೆ ಒಳಚರಂಡಿ ಮಾಡಲು ಅಗತ್ಯ ಅನುದಾನ ಕೊಡುವಂತೆ ನಗರಾಭಿವೃದ್ಧಿ ಸಚಿವರಿಗೆ ಪೂರಕ ಅಂದಾಜುಪಟ್ಟಿ ಸಲ್ಲಿಸಿದ್ದು, ಇದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಡಿ.ಶಿವುನಾಯಕ್, ಮುಖ್ಯಾಧಿಕಾರಿ ಬಿ.ವಿ.ವೆಂಕಟೇಶ್ ಮಾತನಾಡಿದರು. ಸದಸ್ಯರಾದ ಕೋಳಿಪ್ರಕಾಶ್, ನಟರಾಜು, ಕೆ.ಎಸ್.ಶಂಕರ್, ಮಾಜಿ ಸದಸ್ಯ ಕೆ.ವಿನಯ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ರಮೇಶ್, ಮುಖಂಡರಾದ ನವೀದ್‌ಅಹಮದ್, ವೃಷಭೇಂದ್ರ, ಚಿಕ್ಕವೀರು, ವಿ.ಸುರೇಶ್, ಆದರ್ಶ, ಮಹೇಶ್, ತಿಮ್ಮಶೆಟ್ಟಿ, ವ್ಯವಸ್ಥಾಪಕಿ ಸುಧಾರಾಣಿ, ಅಭಿಯಂತರರಾದ ಸೌಮ್ಯ, ಅಭಿಷೇಕ್, ಕಂದಾಯಾಧಿಕಾರಿ ಜಿ.ಎಸ್.ರಮೇಶ್, ಆರೋಗ್ಯ ನಿರೀಕ್ಷಕರಾದ ಎಸ್.ಪಿ.ರಾಜೇಂದ್ರಕುಮಾರ್, ಹೆಚ್.ಎಸ್.ಲೋಕೇಶ್ ಹಾಜರಿದ್ದರು.

RELATED ARTICLES
- Advertisment -
Google search engine

Most Popular