ವರದಿ : ವಿನಯ್ ದೊಡ್ಡಕೊಪ್ಪಲು
ಕೆ.ಆರ್ ನಗರ : ಕೆ.ಆರ್.ನಗರ ತಾಲೂಕಿನಲ್ಲಿ ನದಿಯ ಹಿನ್ನಿರಿನಲ್ಲಿ ಭತ್ತದ ಬೆಳೆ ಮುಳುಗಡೆಯಾಗಿ ಭತ್ತ ಕಟಾವು ಮಾಡದೇ ರೈತರ ನಷ್ಟ ಉಂಟಾಗಿದ್ದು ಸರ್ಕಾರ ಈ ರೈತರಿಗೆ ಪರಿಹಾರ ಒದಗಿಸುವಂತೆ ಶಾಸಕ ಡಿ.ರವಿಶಂಕರ್ ಒತ್ತಾಯಿಸಿದರು.
ಈ ಸಂಬಂಧ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಕೆ.ಆರ್.ಎಸ್ ಅಣೆಕಟ್ಟಿನ ಹಿನ್ನಿರಿನಿಂದ ಕೆ.ಆರ್.ನಗರ ತಾಲೂಕಿನ ವಿವಿಧ ಗ್ರಾಮಗಳು ರೈತರು ಬೆಳೆದ ಭತ್ತ ಬೆಳೆ ಮುಳುಗಡೆಯಾಗಿದ್ದು ಇದರಿಂದ ರೈತರಿಗೆ ಅಪಾರ ನಷ್ಟವಾಗಿರುವುದರಿಂದ ಪರಿಹಾರ ಒದಗಿಸುವುದರ ಬಗ್ಗೆ ಮಾನ್ಯ ಕೃಷಿ ಸಚಿವರ ಗಮನ ಸೆಳೆದರು.
ಕೆ.ಆರ್.ಎಸ್ ಜಲಾಶಯದಲ್ಲಿ ನೀರು ತುಂಬಿದ್ದ ಸಂಧರ್ಭದಲ್ಲಿ ತಾಲ್ಲೂಕಿನ ಗಡಿಗ್ರಾಮಗಳಾದ ತಿಪ್ಪೂರು, ದೆಗ್ಗನಹಳ್ಳಿ, ಕೆಗ್ಗೆರೆ, ಹೊಸೂರುಕಲ್ಲಹಳ್ಳಿ, ಸೌತನಹಳ್ಳಿ, ಸೇರಿದಂತೆ ಈ ಭಾಗದಲ್ಲಿ ಬರುವ ಹಲವಾರು ಗ್ರಾಮಗಳ ಜನತೆ ಜಮೀನಿನಲ್ಲಿ ಭತ್ತದ ಬೆಳೆಯನ್ನು ತಲತಲಾಂತರದಿಂದ ಬೆಳೆದುಕೊಂಡು ಬಂದಿದೆ ಎಂದು ಅಧಿವೇಶನದಲ್ಲಿ ತಿಳಿಸಿದರು.
ಈ ಬಾರಿ ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ 124.5೦ ಇದ್ದ ನೀರಿನ ಮಟ್ಟ ಈ ಬಾರಿ 124.80 ಇದ್ದ ಪರಿಣಾಮವಾಗಿ ಹಿನ್ನಿರಿನ ಮಟ್ಟ ಜಾಸ್ತಿಯಾಗಿ ಭತ್ತದ ಬೆಳೆ ಮುಳುಗಿ ಹಾಳಗಿರುವುದರಿಂದ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಬೆಳೆ ಕಳೆದು ಕೊಂಡ ನಷ್ಟ ಅನುಭವಿಸಿರುವ ರೈತರಿಗೆ ಪರಿಹಾರನ್ನು ನೀಡಬೇಕೆಂದು ಡಿ.ರವಿಶಂಕರ್ ಸದನದ ಮೂಲಕ ಸರ್ಕಾರಕ್ಕೆ ಮನವಿ ಮಾಡಿದರು.
ಅಲ್ಲದೇ ಕೆ.ಆರ್.ಎಸ್.ನೀರಿನ ಮಟ್ಟವನ್ನು ಇಳಿಸಿದರೆ ಉಳಿದ ಜಮೀನಿನಲ್ಲಿ ಉಳಿದಿರುವ ಭತ್ತದ ಕಟಾವು ಮಾಡಿ ಕೊಳ್ಳಲು ಅವಕಾಶವನ್ನು ಮಾಡಿ ಕೊಡಬೇಕೆಂದು ಸರ್ಕಾರದ ಗಮನ ಸೆಳೆದಾಗ ಇದಕ್ಕೆ ಸದನದಲ್ಲಿ ಉತ್ತರಿಸಿದ ಕಂದಾಯ ಸಚಿವ ಕೃಷ್ಣೇಬೈರೇಗೌಡ ಜಿಲ್ಲಾಧಿಕಾರಿಗಳಿಗೆ ಈ ಸಂಬಂಧ ಸರ್ವೆ ನಡೆಸಿ ಪರಿಹಾರ ಕೊಡಿಸುವುದಾಗಿ ತಿಳಿಸಿದರು.