ಹೊಸೂರು : ಶ್ರೀರಾಮ ರಥಕ್ಕೆ ಹೊಸದಾಗಿ ಹಾಕಲಾಗಿದ್ದ ಚಕ್ರಗಳು ಶಿಥಿಲಗೊಂಡಿರುವ ಕಾರಣ ಅವುಗಳನ್ನ ತೆಗೆದು ಹೊಸ ಚಕ್ರಗಳನ್ನು ಅಳವಡಿಸುವಂತೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಡಿ.ರವಿಶಂಕರ್ ಸೂಚನೆ ನೀಡಿದರು.
ಜನವರಿ ತಿಂಗಳಲ್ಲಿ ನಡೆಯುವ ಸಾಲಿಗ್ರಾಮ ತಾಲೂಕಿನ ಚುಂಚನಕಟ್ಟೆ ಶ್ರೀರಾಮ ರಥೋತ್ಸವ ಮತ್ತು ದೇವಾಲಯದ ಅಭಿವೃದ್ದಿಗೆ ಕುರಿತು ಚುಂಚನಕಟ್ಟೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು
ಜನವರಿಯ ಸಂಕ್ರಾಂತಿ ಹಬ್ಬದ ಮಾರನೇ ದಿನನಡೆಯುವ ರಥೋತ್ಸವಕ್ಕೆ ಇನ್ನು ಮೂರುವರೆ ತಿಂಗಳು ಇದ್ದು ಅದರ ಒಳಗೆ ಹೊಸಚಕ್ರಗಳನ್ನು ಮಾಡಿಸಿ ಇದಕ್ಕೆ ಬೇಕಾಗುವ ಅನುಧಾನವನ್ನು ಸರ್ಕಾರದಿಂದ ಬಿಡುಗಡೆ ಮಾಡಿಸಲಾಗುವುದು ರಥದ ವೇಳೆಯಲ್ಲಿ ಯಾವುದೇ ಲೋಪಬರದಂತೆ ಎಚ್ಚರ ವಹಿಸಬೇಕೆಂದು ಹೇಳಿದರು. ಪ್ರವಾಸಿ ಮಂದಿರದ ಅವರಣದಲ್ಲಿ ಪ್ರವಾಸೋಧ್ಯಮ ಇಲಾಖೆ ವತಿಯಿಂದ ನಿರ್ಮಿಸಿರುವ ಯಾತ್ರಿ ಭವನವನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರ ಮಾಡುವಂತೆ ಮತ್ತು ಅದನ್ನು ಸೂಕ್ತ ನಿರ್ವಹಣೆ ಮಾಡುವಂತೆ ಸೂಚನೆ ನೀಡಿದರು.
ಜಾನುವಾರು ಜಾತ್ರೆ ರಥೋತ್ಸವದ ವೇಳೆ, ಸ್ವಚ್ಚತೆ, ಕುಡಿಯುವ ನೀರು ,ಜಾತ್ರಾ ಮಾಳದಲ್ಲಿ ಹೆಚ್ಚಿನ ಲೈಟಿಂಗ್ ,ಸಾರಿಗೆ, ಸೂಕ್ತ ಭದ್ರತೆ ವ್ಯವಸ್ಥೆ ಜೊತೆ ಜಾನುವಾರು ಮತ್ತು ಸಾರ್ವಜನಿಕರ ತಾಕ್ಕಲಿಕ ಆಸ್ವತ್ರೆಗಳನ್ನು ತೆರೆಯ ಬೇಕು ಎಂದ ಅವರು ಈ ಸಂಬಂಧ ಮತ್ತೊಂದು ಸಭೆಯನ್ನು ಮಾಡಿ ಅಧಿಕಾರಿಗಳಿಗೆ ಮಾರ್ಗದರ್ಶನ ಮಾಡಲಾಗುವುದು ಎಂದರು.
ಸಭೆಯಲ್ಲಿ ಮಾತನಾಡಿದ ಕಾಂಗ್ರೇಸ್ ಮುಖಂಡರಾದ ಹೊಸೂರು ಡೈರಿಮಾದು, ಬಡಾವಣೆ ಮಹಾಲಿಂಗು ಮತ್ತಿತರರು ಬಡವರಿಗೆ ಅನುಕೂಲವಾಗಂತೆ ದೇವಾಲಯದ ಸಮೀಪ ಕಲ್ಯಾಣ ಮಂಟಪ ಮತ್ತು ಭಕ್ತರು ತಂಗಲು ವಸತಿಗೃಹಗಳನ್ನು ನಿರ್ಮಿಸುವಂತೆ ಮನವಿಮಾಡಿದಾಗ ಶಾಸಕರು ಸರ್ಕಾರದಿಂದ ಅನುಧಾನಬಿಡುಗಡೆ ಮಾಡಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ತಾ.ಪಂ.ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದಯಶಂಕರ್, ಎಪಿಎಂಸಿ ಮಾಜಿ ಅಧ್ಯಕ್ಷ ಕೆಡಗ ನಟರಾಜು ಕುಪ್ಪೆ ಸಹಕಾರ ಸಂಘದ ಅಧ್ಯಕ್ಷ ಸಿ.ಬಿ.ಸಂತೋಷ್, ಹೊಸೂರು ಕಾಲೇಜು ಅಧಕ್ಷ ಎಚ್.ಎಸ್.ಶ್ರೀನಿವಾಸ್, ಕಾಂಗ್ರೇಸ್ ಮುಖಂಡರಾದ ಎಲ್.ಐ.ಸಿ.ಜಗದೀಶ್, ಹಳಿಯೂರು ಪ್ರಭಾಕರ್, ಎಚ್.ಜೆ.ರಮೇಶ್,ಪರುಶುರಾಮ್, ಬಡ್ಡೆಮಂಜು, ಸಿ.ಎಸ್.ಗಿರೀಶ್, ಸಿ.ಟಿ.ಪಾರ್ಥ, ಮೀನ್ ಮಧು,ರಂಗಸ್ವಾಮಿ, ಮುನ್ನಾ, ಹೆಬ್ಬಾಳು ಸೋಮಣ್ಣ,ನಾಯಕ ಸಮಾಜದ ಮುಖಂಡ ಪೇಪರ್ ಮಣಿಕಂಠ, ದಲಿತ ಮುಖಂಡ ಹೊಸಕೋಟೆ ಚೆಲುವರಾಜು, ಗ್ರಾ.ಪಂ.ಸದಸ್ಯರಾದ ಗೌರಮ್ಮ,ನೂತನ್ ಗೌಡ, ತಹಸೀಲ್ದಾರ್ ಪೂರ್ಣಿಮಾ, ಉಪತಹಸೀಲ್ದಾರ್ ಕೆ.ಜೆ.ಶರತ್,ಲೋಕೋಪಯೋಗಿ ಇಲಾಖೆ ಎಇಇ ಸುಮಿತಾ, ಪಿಐ ಕೃಷ್ಣರಾಜು,ಪಿಡಿಓ ಯೋಗನಂದ್, ಪಾರುಪತ್ತೆದಾರ್ ಯತೀರಾಜ್, ಸಾಲಿಗ್ರಾಮ ತಾಲೂಕು ಕಚೇರಿಯ ಗುಮಾಸ್ತ ರಾಕೇಶ್, ಅರ್ಚಕ ವಾಸುದೇವನ್, ಸೇರಿದಂತೆ ಮತ್ತಿತರರು ಹಾಜರಿದ್ದರು.
- ಶ್ರೀರಾಮ ರಥೋತ್ಸವದ ಪೂರ್ವಭಾವಿ ಸಭೆಗೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಗೈರು ಹಾಜರಾದ ಹಿನ್ನಲೆಯಲ್ಲಿ ಶಾಸಕ ಡಿ.ರವಿಶಂಕರ್ ಗರಂ ಆದ ಘಟನೆ ನಡೆಯಿತು.
- ಸಭೆ ನಡೆಯುವ ಕುರಿತು ಮಾಹಿತಿ ನೀಡಿದ್ದರು ಸಭೆಗೆ ಗೈರು ಹಾಜರಾಗಿರುವುದನ್ನ ತಾವು ಸಹಿಸುವುದಿಲ್ಲ ಗೈರು ಹಾಜರಾದವರಿಗೆ ನೋಟಿಸ್ ನೀಡುವಂತೆ ತಹಸೀಲ್ದಾರ್ ಅವರಿಗೆ ಸೂಚನೆ ನೀಡಿದರು.