ಕೆ ಆರ್ ನಗರ: ಸಕ್ಕರೆ ಗ್ರಾಮದಲ್ಲಿ ಚಾಮರಾಜ ಬಲದಂಡೆ ನಾಲೆಗೆ ಇಂದು ಶಾಸಕ ಡಿ ರವಿಶಂಕರ್ ರವರಿಂದ ಬಾಗಿನ ಅರ್ಪಿಸಲಾಯಿತು.
ಪೂಜೆ ಸಲ್ಲಿಸಿದ ಬಳಿಕ ಎಲ್ಲಾ ಕಾಲುವೆಗಳಿಗೆ ನೀರನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಡಿ ರವಿಶಂಕರ್ ಅವರು, ಕೆಲವು ದಿನಗಳಿಂದ ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಎಲ್ಲಾ ಕೆರೆಕಟ್ಟೆಗಳು ತುಂಬಿದೆ. ರೈತರಲ್ಲಿ ಸಂತಸ ಮೂಡಿದೆ ಹಾಗೂ ಮುಂದಿನ ದಿನಗಳಲ್ಲಿ ಮೊದಲು ಕೆರೆಕಟ್ಟೆಗಳಿಗೆ ನೀರನ್ನು ಹರಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದ್ದು, ಅಂತೆಯೇ ಎಲ್ಲಾ ಕೆರೆಕಟ್ಟೆಗಳಿಗೆ ನೀರನ್ನು ಬಿಡಲಾಗುವುದು ಎಂದು ತಿಳಿಸಿದರು.
