ಯಳಂದೂರು: ನಂಜನಗೂಡು ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ ಸೋಮವಾರ ತಾಲೂಕಿನ ಬಿಳಿಗಿರಿರಂಗನಬೆಟ್ಟಕ್ಕೆ ತಮ್ಮ ಸ್ನೇಹಿತರೊಂದಿಗೆ ಭೇಟಿ ನೀಡಿ ಮುಡಿಸೇವೆಯನ್ನು ಮಾಡಿಸಿ ದೇವರ ದರ್ಶನವನ್ನು ಪಡೆದುಕೊಂಡರು.
ತಮ್ಮ ಮನೆ ದೇವರಾಗಿರುವ ಬಿಳಿಗಿರಿರಂಗನಾಥಸ್ವಾಮಿ ದರ್ಶನವನ್ನು ಪಡೆದ ಇವರು ತಮ್ಮ ತಂದೆ ಧ್ರುವನಾರಾಯಣ, ತಮ್ಮ ತಾಯಿ ವೀಣಾರವರ ನಿಧನದ ನಂತರ ಮುಡಿಯನ್ನು ಮಾಡಿಸಿರಲಿಲ್ಲ. ಇಲ್ಲಿಗೆ ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಬಂದಿದ್ದು ದರ್ಶನವನ್ನು ಪಡೆದುಕೊಂಡಿದ್ದೆ. ಆದರೆ ಮುಡಿ ಮಾಡಿಸಲು ನನಗೆ ಸಮಯವೇ ಇರಲಿಲ್ಲ. ಈಗ ಬಿಡುವು ಮಾಡಿಕೊಂಡು ಬಂದಿದ್ದು ಮುಡಿಯನ್ನು ನೀಡಿದ್ದು, ವಿಶೇಷ ಪೂಜೆಯನ್ನು ಸಲ್ಲಿಸಿ, ದೇವರ ದರ್ಶನವನ್ನು ಪಡೆದುಕೊಂಡಿದ್ದೇನೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಇವರ ಸ್ನೇಹಿತರಾದ ಮಹಾನಿಧಿ, ಭರತೇಶ್, ವಿಶ್ವಾಸ್ ಕಾಂಗ್ರೆಸ್ ಮುಖಂಡ ವೆಂಕಟೇಶ್ ಸೇರಿದಂತೆ ಹಲವರು ಇದ್ದರು.