ಮೈಸೂರು : ಶಾಸಕ ಜಿ.ಟಿ.ದೇವೇಗೌಡರ ಪತ್ನಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿದ್ದ ವೇಳೆ ೧೯.೨೫ ಕೋಟಿ ರೂ. ಅವ್ಯವಹಾರವಾಗಿ ಎಫ್‌ಐಆರ್ ಆಗಿದೆ. ಹಾಗಾಗಿ ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಜಿ.ಟಿ.ದೇವೇಗೌಡರು ಓಲೈಕೆ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಗಂಭೀರ ಆರೋಪ ಮಾಡಿದರು.
ಶಾಸಕ ಜಿ.ಟಿ.ದೇವೇಗೌಡರ ಪತ್ನಿ ಅಧ್ಯಕ್ಷರಾಗಿದ್ದ ಅಪೆಕ್ಸ್ ಬ್ಯಾಂಕ್‌ನಲ್ಲಿ ೧೯.೨೫ ಕೋಟಿ ಅವ್ಯವಹಾರವಾಗಿದೆ. ಈ ಸಂಬಂಧ ಎಫ್.ಐ.ಆರ್ ಕೂಡ ಆಗಿದೆ. ಅವರ ಪತ್ನಿಯೇ ಅವ್ಯವಹಾರ ಮಾಡಿದ್ದಾರೆ ಎಂದು ಹೇಳುತ್ತಿಲ್ಲ, ಅವರು ಅಧ್ಯಕ್ಷರಾಗಿದ್ದ ವೇಳೆ ಅವ್ಯವಹಾರವಾಗಿದೆ. ಬೇಕಿದ್ದರೆ ಸಾಕ್ಷ್ಯ ನೋಡಿ ಎಂದು ಮಾಧ್ಯಮಗಳ ಮುಂದೆ ಎಫ್.ಐ.ಆರ್ ಕಾಪಿ ತೋರಿಸಿದರು.
ಮುಡಾ ೫೦:೫೦ ಸೈಟ್ ವಿಚಾರ ಸಂಬಂಧ ಇನ್ನಷ್ಟು ದಿನ ಕಾಯುತ್ತಿದ್ದರೆ ಪಟ್ಟಿಯೇ ಬಿಡುಗಡೆಯಾಗುತ್ತದೆ. ಯಾರದು ಸೈಟ್ ಇದೆ, ಇಲ್ಲ ಎನ್ನುವುದು ಗೊತ್ತಾಗಲಿದೆ. ಶಾಸಕ ಜಿ.ಟಿ.ದೇವೇಗೌಡ ಗಾಜಿನ ಮನೆಯಲ್ಲಿ ಕುಳಿತು ಹಂಚಿನ ಮನೆಗೆ ಕಲ್ಲು ಹೊಡೆಯುವುದು ಸೂಕ್ತವಲ್ಲ. ಮೂಡಾ ಸೈಟ್ ವಿಚಾರವನ್ನು ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ. ಮುಡಾದಲ್ಲಿ ೫೦:೫೦ ಅನುಪಾತದಡಿ ಎಷ್ಟು ಜನಕ್ಕೆ ನಿವೇಶನ ಹಂಚಿಕೆಯಾಗಿದೆ ಎಂದು ಈಗಾಗಲೇ ಪ್ರಶ್ನೆ ಎತ್ತಿದ್ದೇನೆ ಎಂದು ಎಂಎಲ್‌ಸಿ ಮಂಜೇಗೌಡ ತಿಳಿಸಿದರು