Wednesday, February 18, 2026
Google search engine

Homeರಾಜ್ಯಸುದ್ದಿಜಾಲನೂತನ ಅಗ್ನಿಶಾಮಕ ವಾಹನಕ್ಕೆ ಚಾಲನೆ ನೀಡಿದ ಶಾಸಕ ಹೆಚ್.ಟಿ.ಮಂಜು

ನೂತನ ಅಗ್ನಿಶಾಮಕ ವಾಹನಕ್ಕೆ ಚಾಲನೆ ನೀಡಿದ ಶಾಸಕ ಹೆಚ್.ಟಿ.ಮಂಜು

ಕೆ.ಆರ್.ಪೇಟೆ : ಅಗ್ನಿಶಾಮಕ ಸಿಬ್ಬಂದಿಗಳ ಬಹಳ ವರ್ಷಗಳ ಬೇಡಿಕೆಯಾಗಿದ್ದ ನೂತನ ಅಗ್ನಿಶಾಮಕ ವಾಹನವನ್ನು ಇಂದು ಒದಗಿಸಲಾಗಿದೆ ಎಂದು ಶಾಸಕ ಹೆಚ್.ಟಿ.ಮಂಜು ತಿಳಿಸಿದರು.
ಈ ಬಗ್ಗೆ ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ನೂತನ ಅಗ್ನಿಶಾಮಕ ವಾಹನವನ್ನು ಸಾರ್ವಜನಿಕ ಸೇವೆಗೆ ಸಮರ್ಪಿಸಿ ಮಾತನಾಡಿದರು.

ಮುಂದುವರೆದು ಕಳೆದ ಐದಾರು ವರ್ಷಗಳಿಂದಲೂ ಅಗ್ನಿಶಾಮಕ ಸಿಬ್ಬಂದಿಗಳಿಗೆ ಹೊಸ ವಾಹನ ಇರಲಿಲ್ಲ. ಹಳೆಯ ವಾಹನದಲ್ಲಿ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತಿರಲಿಲ್ಲ. ಅತಿ ತುರ್ತು ಸಮಯದಲ್ಲಿ ನಾಗಮಂಗಲದಿಂದ ಅಗ್ನಿಶಾಮಕ ವಾಹನವನ್ನು ತರಿಸಿಕೊಂಡು ಕಾರ್ಯಾಚರಣೆ ಮುಗಿಸಿ ವಾಹನವನ್ನು ವಾಪಸ್ ಕಳುಹಿಸಬೇಕಾದ ಪರಿಸ್ಥಿತಿ ಇತ್ತು. ಇದನ್ನು ಮನಗಂಡು ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ ಹಿನ್ನೆಲೆಯಲ್ಲಿ ಒಂದು ಹೊಸ ಅಗ್ನಿಶಾಮಕ ವಾಹನವನ್ನು ಒದಗಿಸಲಾಗಿದೆ.

ಹೊಸ ವಾಹನದಲ್ಲಿ ಅಗ್ನಿಶಾಮಕ ಸಿಬ್ಬಂದಿಗಳು ಕ್ರಿಯಾತ್ಮಕವಾಗಿ ಕೆಲಸ ಮಾಡಲಿದ್ದಾರೆ. ಆದರೆ ನಮ್ಮ ತಾಲೂಕಿನಲ್ಲಿ ಬೆಂಕಿ, ನೀರು ಗ್ಯಾಸ್, ವಿದ್ಯುತ್ ಅವಘಢಗಳು ಸಂಭವಿಸದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಜೆಡಿಎಸ್ ಕಾನೂನು ಘಟಕದ ಅಧ್ಯಕ್ಷ ಕುರುಬಹಳ್ಳಿ ನಾಗೇಶ್, ತಾಪಂ ಮಾಜಿ ಸದಸ್ಯ ಹುಲ್ಲೇಗೌಡ, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ದಯಾನಂದ್, ಸೋಮಶೇಖರಗೌಡ, ದಿನೇಶ್, ಪ್ರಮೋದ್, ಪ್ರದೀಪ್‍ಕುಮಾರ್, ಸಚ್ಚೀನ್, ಶ್ರೀಕಾಂತ್, ಮಂಜುನಾಥ, ಚಂದನ್ ಕುಮಾರ್, ಓಂಕಾರ್ ಪಾಟೀಲ್, ಭಜಂತ್ರಿ, ಶ್ರೀಧರ ಅವಟಿ, ಯಮುನಪ್ಪ, ಮೌನೇಶ್ ಶಾಸಕರ ಆಪ್ತ ಸಹಾಯಕ ಪ್ರತಾಪ್, ಸೇರಿದಂತೆ ಹಲವರಿದ್ದರು.

RELATED ARTICLES
- Advertisment -
Google search engine

Most Popular