ಹನಗೋಡು: ಹುಣಸೂರಿನ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ರವರ ಪುತ್ರ ಎಚ್ ಎಂ ಪವನ್ ತಪಸ್ವಿ ಹಾಗೂ ಅಮೂಲ್ಯ ರವರ ವಿವಾಹ ಮಹೋತ್ಸವವು ಸೆಪ್ಟಂಬರ್ 1 ಶುಕ್ರವಾರ ಚಿಕ್ಕಬಳ್ಳಾಪುರದ ನಂದಿ ಬೆಟ್ಟದ ತಪ್ಪಲಿನ ಅಮಿತ ರಸ ರೆಸಾರ್ಟ್ ನಲ್ಲಿ ನಡೆಯಿತು.

ವಿವಾಹ ಮಹೋತ್ಸವದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ವಿಧಾನಸಭಾ ಅಧ್ಯಕ್ಷರಾದ ಯು.ಟಿ ಖಾದರ್, ಸಚಿವರಾದ ಎಚ್.ಸಿ.ಮಹದೇವಪ್ಪ, ಕೆ ವೆಂಕಟೇಶ್, ಸತೀಶ್ ಜಾರಕಿಹೊಳಿ, ರಾಮಲಿಂಗ ರೆಡ್ಡಿ, ಚೆಲುವರಾಯಸ್ವಾಮಿ, ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್, ಪ್ರಿಯಾಂಕ ಖರ್ಗೆ, ಎಸ್ ಎಸ್ ಮಲ್ಲಿಕಾರ್ಜುನ,ಡಾ. ಶರಣಗೌಡ ಪಾಟೀಲ್, ಕೆ.ಜೆ ಜಾರ್ಜ್, ಎಂ ಸಿ ಸುಧಾಕರ್, ಬಿ ನಾಗೇಂದ್ರ, ಶಿವರಾಜ ತಂಗಡಗಿ, ಸಂತೋಷ್ ಲಾಡ್, ಕಲ್ಯಾಣ ಕರ್ನಾಟಕ ಅಧ್ಯಕ್ಷ ಅಜಯ್ ಸಿಂಗ್ ಸೇರಿದಂತೆ ಶಾಸಕರುಗಳಾದ ಡಿ ರವಿಶಂಕರ್, ಅನಿಲ್ ಚಿಕ್ಕಮಾದು, ಪ್ರದೀಪ್ ಈಶ್ವರ್, ರವಿಗಣಿಗ,ರಮೇಶ್ ಬಂಡಿಸಿದ್ದೇಗೌಡ, ಎಂ ಕೃಷ್ಣಪ್ಪ ಪ್ರಿಯಕೃಷ್ಣ,, ಶರತ್ ಬಚ್ಚೇಗೌಡ, ಎ ಆರ್ ಕೃಷ್ಣಮೂರ್ತಿ, ಗಣೇಶ್ ಪ್ರಸಾದ್, ಕೊತ್ತೂರು ಮಂಜುನಾಥ್, ವಿಧಾನ ಪರಿಷತ್ ಸದಸ್ಯರಾದ ಡಿ.ತಿಮ್ಮಯ್ಯ, ಎಂ ಎಸ್ ಸೀತಾರಾಮು,ಯುವಮುಖಂಡ ರಾಕೇಶ್ ಪಾಪಣ್ಣ, ಹುಣಸೂರು ರಾಘವೇಂದ್ರ, ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಅನೇಕ ಗಣ್ಯರು ಭಾಗಿಯಾಗಿ ಯಾವ ವಧು-ವರರಿಗೆ ಶುಭ ಕೋರಿದರು.
