ಮಂಡ್ಯ: ಜಿಲ್ಲೆ ಕೆ.ಆರ್.ಪೇಟೆ ಪಟ್ಟಣದಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣಕ್ಕೆ ಶಾಸಕ ಹೆಚ್ ಟಿ ಮಂಜು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ರೀಡಾಂಗಣದಲ್ಲಿ ಬೆಳಿಗ್ಗೆ ಸಮಯದಲ್ಲಿ ವಾಯು ವಿಹಾರಕ್ಕೆ ಆಗಮಿಸುವ ಸಾರ್ವಜನಿಕರು. ಶಾಸಕರಿಗೆ ಕ್ರೀಡಾಂಗಣದ ಅವ್ಯವಸ್ಥೆ ಬಗ್ಗೆ ದೂರು ಬಂದ ಹಿನ್ನಲೆಯಲ್ಲಿ ದಿಢೀರ್ ಭೇಟಿ ನೀಡಿ ಇಂಡೋರ್ ಸ್ಟೇಡಿಯಂ ಕಚೇರಿಯಲ್ಲಿ ಸಭೆ ನಡೆಸಿದರು.
ಕ್ರೀಡಾಂಗಣದ ಸುತ್ತಲೂ ವೀಕ್ಷಣೆ ಮಾಡಿ ಸಾರ್ವಜನಿಕ ಶೌಚಾಲಯ ನೋಡಿ ಬೇಸರ ವ್ಯಕ್ತಪಡಿಸಿದರು.
ಅಲ್ಲದೆ ಸುತ್ತಲೂ ಸ್ವಚ್ಛತೆ ಇಲ್ಲದೇ ಅಲ್ಲಲ್ಲಿ ಕಸದ ರಾಶಿ ನೋಡಿ ಕೋಪಗೊಂಡು ಅವ್ಯವಸ್ಥೆಯನ್ನು ಮೂರುನಾಲ್ಕು ದಿನಗಳ ಒಳಗೆ ಸರಿಪಡಿಸಿ, ನಾನೇ ಖುದ್ದಾಗಿ ವಾರಕ್ಕೊಮ್ಮೆ ಭೇಟಿ ನೀಡುತ್ತೇನೆ ಎಂದು ಕ್ರೀಡಾಂಗಣ ನಿರ್ವಹಣೆ ಮಾಡುವ ವ್ಯಕ್ತಿಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓಂಪ್ರಕಾಶ್, ನಿರ್ದೇಶಕ ಹಾಗೂ ತಾ.ಪಂ.ಸದಸ್ಯ ಹೆಳವೇಗೌಡ ಇದ್ದರು.