ಕೆ.ಆರ್.ಪೇಟೆ : ಪಟ್ಟಣದ ಹೊರವಲಯದಲ್ಲಿರುವ ಶ್ರೀ ಜಯಮ್ಮ ರಾಮಸ್ವಾಮಿ ಭವನದ ಆವರಣದಲ್ಲಿ ಹೆಚ್.ಟಿ.ಮಂಜು ಅಭಿಮಾನಿ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಶಾಸಕ ಹೆಚ್.ಟಿ.ಮಂಜುರವರಿಗೆ ಅಭಿನಂದನೆ ಸಮಾರಂಭ ಮತ್ತು ೪೯ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಬೃಹತ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮುಖಾಂತರ ಆರಂಭಿಸಿದ ಕರ್ನಾಟಕ ಸಹಕಾರ ಮಹಾಮಂಡಳ ನಿರ್ದೇಶಕ ಚೋಳೇನಹಳ್ಳಿ ಪುಟ್ಟಸ್ವಾಮಿಗೌಡರವರು ಕ್ಷೇತ್ರದ ಜನರು ನಿಮ್ಮನ್ನು ಅಭಿವೃದ್ಧಿ ಕ್ರಾಂತಿ ಮೂಡಿಸುವ ಮನೋಭಾವದ ವ್ಯಕ್ತಿ ಎಂದು ಬಹುಮತದಿಂದ ಆರಿಸಿ ವಿಧಾನಸೌಧಕ್ಕೆ ಕಳಿಸಿದ್ದಾರೆ ಅದಕ್ಕೆ ಋಣಿಯಾಗಿ ಹತ್ತು ವರ್ಷದಿಂದ ತಾಲೂಕಿನಲ್ಲಿ ಅಭಿವೃದ್ಧಿ ಎನ್ನುವ ಪದವೇ ತಿಳಿಯದೇ ವಂಚಿತರಾಗಿರುವ ಜನರ ಕಷ್ಟಕ್ಕೆ ಸ್ಪಂದಿಸಿ ತಾಲೂಕಿನ ಸರ್ವಾಂಗಿಣ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿ.ತಾಲೂಕಿನ ಹಲವಾರು ಸಮಾಜಮುಖಿ ರಾಜಕಾರಣಿಗಳಂತೆ ಸಾಮರಸ್ಯ ರಾಜಕಾರಣಕ್ಕೆ ಒತ್ತು ಕೊಟ್ಟು.ಸಜ್ಜನಿಕೆಯ ರಾಜಕಾರಣಿಗಳೆಂದು ಪ್ರಸಿದ್ದಿ ಪಡೆದು ನಿಮ್ಮ ಆಡಳಿತದಲ್ಲಿ ತಾರತಮ್ಯ ಮತ್ತು ಪಕ್ಷ ಬೇದ ಮಾಡದೇ ಮುಂದಿನ ಅವಧಿಯಲ್ಲೂ ನಿಮ್ಮ ಗೆಲುವಿನ ಬಾವುಟ ನಿಶ್ಚಯಾಗುವ ನಿಟ್ಟಿನಲ್ಲಿ ದುಡಿಯಬೇಕು ಎಂದು ಸಲಹೆ ನೀಡಿದರು.
ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಹೆಚ್.ಟಿ.ಮಂಜು ಸನ್ಮಾನ ಅಭಿನಂದನೆಗಳಿಂದ ಮತ್ತಷ್ಟು ನನಗೆ ಅಭಿವೃದ್ಧಿಯ ಜವಾಬ್ದಾರಿಯ ಹೆಗಲಿಗೆ ಏರಿಸಿದ್ದೀರಿ.ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ ನನ್ನನ್ನು ನಿಮ್ಮೆಲ್ಲರ ಸೇವೆ ಸಲ್ಲಿಸಲು ಆಶೀರ್ವದಿಸಿದ್ದೀರಿ ಒಂದು ಕ್ಷಣವನ್ನು ವ್ಯರ್ಥ ಮಾಡದೆ ತಾಲೂಕಿನ ಜನರ ಸೇವೆಗೆ ಸದಾ ಸಿದ್ದರಿಸುತ್ತೇನೆ.ಜಾತ್ಯತೀತ ನಿಲುವು ನನ್ನಲ್ಲಿದ್ದ ಕಾರಣವೇ ನನ್ನ ಕ್ಷೇತ್ರದ ಜನರು ಶಾಸಕನಾಗಿ ಆಯ್ಕೆ ಮಾಡಿದ್ದಾರೆ.ನನ್ನ ಅಧಿಕಾರದ ಅವಧಿಯಲ್ಲಿ ಇಡೀ ಕ್ಷೇತ್ರಕ್ಕೆ ಶಾಸಕನಾಗಿ ಪಕ್ಷಾತೀತ ಕೆಲಸ ಮಾಡುತ್ತೇನೆ ಹೊರತು ದ್ವೇಷ ರಾಜಕಾರಣಕ್ಕೆ ಒತ್ತು ನೀಡದೆ ಸರ್ವ ಸಮುದಾಯದ ಅಭಿವೃದ್ಧಿಗೆ ದುಡಿಯುತ್ತೇನೆ ಎಂದರು.ಬಳಿಕ ಹೆಚ್.ಟಿ ಮಂಜು ಅಭಿಮಾನಿಗಳಿಂದ ನೂತನ ಶಾಸಕ ಹೆಚ್. ಟಿ ಮಂಜು ಅವರಿಗೆ ಬೆಳ್ಳಿಗದೆ ಮತ್ತು ರೈತರಿಗೆ ತೆಂಗಿನ ಸಸಿ. ತಾಲೂಕು ಸಾರ್ವಜನಿಕ ಆಸ್ಪತ್ರೆಯ ಹೊರ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿ. ಬೃಹತ್ ಕೇಕ್ ಕತ್ತರಿಸುವ ಮೂಲಕ ಅಭಿನಂದಿಸಿ ಅರ್ಥಪೂರ್ಣವಾಗಿ ಹುಟ್ಟು ಹಬ್ಬದ ಆಚರಿಸಿದರು.ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಚಂದ್ರೆಗೌಡ,ರಾಜ್ಯ ಮಾರಾಟ ಮಹಾಮಂಡಳಿ ನಿರ್ದೇಶಕ ಶೀಳನೆರೆ ಮೋಹನ್,ಜೆಡಿಎಸ್ ತಾಲೂಕು ಅಧ್ಯಕ್ಷ ಎ ಎನ್ ಜಾನಕಿರಾಮ್,ಮನ್ಮುಲ್ ನಿರ್ದೇಶಕ ಡಾಲು ರವಿ,ಜೆಡಿಎಸ್ ಮುಖಂಡ ಅಕ್ಕಿಹೆಬಾಳು ರಘು, ಮನ್ಮುಲ್ ಮಾಜಿ ಅಧ್ಯಕ್ಷ ಎಂ.ಬಿ.ಹರೀಶ್,ಎಂ ಡಿ ಸಿ ಸಿ ಬ್ಯಾಂಕ್ ಉಪಾಧ್ಯಕ್ಷ ಹೊಸಹೊಳಲು ಅಶೋಕ್, ಯುವ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಕುರುಬಹಳ್ಳಿ ನಾಗೇಶ್,ಜೆಡಿಎಸ್ ವಕ್ತಾರ ಮತ್ತು ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಗದ್ದೆಹೊಸೂರು ಅಶ್ವಿನ್,ಜೆಡಿಎಸ್ ಕಾನೂನು ಘಟಕ ತಾಲೂಕು ಅಧ್ಯಕ್ಷ ವಿ.ಎಸ್.ಧನಂಜಯ್ ಕುಮಾರ್,ತಾ.ಪಂ ಮಾಜಿ ಸದಸ್ಯ ಮಲ್ಲೇನಹಳ್ಳಿ ಮೋಹನ್,ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಐರೋನಹಳ್ಳಿ ಮಲ್ಲೇಶ್,ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ ಕಿರಣ್ ಆನೆಗೋಳ,ಟಿ.ಎ.ಪಿ.ಸಿ.ಎಂ.ಎಸ್ ನಿರ್ದೇಶಕ ಬಲದೇವ್,ಪುರಸಭಾ ಮಾಜಿ ಸದಸ್ಯ ಹೇಮಂತ್ ಕುಮಾರ್,ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಅಗ್ರಹಾರಬಾಚಹಳ್ಳಿ ನಾಗೇಶ್,ಜೆಡಿಎಸ್ ಮುಖಂಡ ಕಾರಿಗನಹಳ್ಳಿ ಕುಮಾರ್,ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ,ಹೆಚ್. ಜೆ ಬಾಬು,ಶಾಸಕರ ಆಪ್ತ ಸಹಾಯಕರಾದ ಪ್ರತಾಪ್. ಪ್ರದೀಪ್.ಜೆಡಿಎಸ್ ಯುವ ಮುಖಂಡರಾದ ಸಚಿನ್ ಕೃಷ್ಣ ಮಾಜಿ ಎಪಿಎಂಸಿ ನಿರ್ದೇಶಕ ಸಿಂದುಘಟ್ಟ ಸೋಮಸುಂದರ್,ಹರಿಹರಪುರ ನರಸಿಂಹ,ಸಿಂಗಾಪುರ ಎಸ್,ಬಿ ಯೋಗೇಶ್,ಅಂಬೇಡ್ಕರ್ ನಗರ ಗಣೇಶ್,ಆಲಂಬಾಡಿ ಕಾವಲು ಚನ್ನಕೃಷ್ಣ,ಸಾರಂಗಿ ಗ್ರಾ,ಪಂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯೋಗೇಶ್,ಸದಸ್ಯರಾದ ರಮೇಶ್,ನಂಜಪ್ಪ,ನವೀನ್,ಸತೀಶ್,ರವಿ,ಧರ್ಮ,ಬಗಳೆಅಭಿ,ಲೋಕೇಶ್,ಹೊನ್ನೇಗೌಡ,ಸೇರಿದಂತೆ ಸಾವಿರಾರು ಅಭಿಮಾನಿಗಳು ಉಪಸ್ಥಿತರಿದ್ದರು