ಮೈಸೂರು: ಚಾಮರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಇಂದು ರೈಲ್ವೇ ಗೇಟ್ ಹತ್ತಿರದ ಬಿ.ಎಂ.ಶ್ರೀ ನಗರ, ಮೇಟಗಳ್ಳಿಯಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ ನೆರವೇರಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿಧಿಯಡಿ ಮೈಸೂರು ಮಹಾನಗರ ಪಾಲಿಕೆಯ ವಾರ್ಡ್ ನಂ. 7 ರಲ್ಲಿ ಮೇಟಗಳ್ಳಿ ಸ್ಮಶಾನದ ಮುಂದಿನ ಉಳಿಕೆ ಉದ್ದದ ರಸ್ತೆಯ” ರೆಸ್ತೆ (ಮೀ) – 160.00, ಅಂದಾಜು ಮೊತ್ತ ರೂ.25.00 ಲಕ್ಷ ಅನುದಾನದಲ್ಲಿ ನಿರ್ಮಿಸಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ವಿ. ರಮೇಶ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಮುಖಂಡರಾದ ಪಟೇಲ್ ವೆಂಕಟರಮಣೇಗೌಡರು, ಚಿಕ್ಕತಮ್ಮಣ್ಣ, ದಾಸಣ್ಣ, ಬಸವರಾಜಣ್ಣ, ನಾಗಮ್ಮ, ಮಂಗಳಮ್ಮರವರು ಉಪಸ್ಥಿತರಿದ್ದರು.