ಚಿತ್ರದುರ್ಗ: ವಾರ್ಡನ್ ಗೆ ಹೊಡೆಯಿರಿ ಎಂದು ಎಂದ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ಪ್ರಚೋಧನಾತ್ಮಕ ಹೇಳಿಕೆ ನೀಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೊಳೆತ ತರಕಾರಿ ಹಾಕಿದ ಉಪಹಾರ, ಊಟ ನೀಡಿದ್ದಾರೆಂದು ವಾರ್ಡನ್ ವಿರುದ್ಧ ಆರೋಪ ಮಾಡಿದ ಕಾನೂನು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆ ಹಿನ್ನೆಲೆ ಹಾಸ್ಟೆಲ್ ಗೆ ಭೇಟಿ ನೀಡಿದ ಶಾಸಕರು ಕಾನೂನು ವಿದ್ಯಾರ್ಥಿಗಳಿಗೇ ಶಾಸಕರಿಂದ ರೂಲ್ಸ್ ಬ್ರೇಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇನ್ನೊಮ್ಮೆ ಹೀಗಾದರೆ ಹುಳಗಳನ್ನೆಲ್ಲ ಒಂದು ತಟ್ಟೆ ಹಾಕಿಕೊಂಡು ಅದೇ ಆಹಾರ ವಾರ್ಡನ್ ಗೆ ತಿನ್ನಿಸಿ. ವಾರ್ಡನ್ ಅನ್ನು ರೂಮಿಗೆ ಹಾಕಿಕೊಂಡು ಹೊಡೆಯಿರಿ. ಯೋಚನೆ ಮಾಡಬೇಡಿ, ನಾನಿರುತ್ತೇನೆ ಎಂದು ಪ್ರಚೋಧನಾತ್ಮಕ ಹೇಳಿಕೆ ನೀಡಿದ್ದಾರೆ.