Monday, December 29, 2025
Google search engine

Homeರಾಜ್ಯಸುದ್ದಿಜಾಲಸರ್ಕಾರಿ ವಾಹನ ಬಳಸಿದ ಶಾಸಕ ರಾಜು ಕಾಗೆ ಪುತ್ರಿ: ನನ್ನನ್ನು ಕರೆಯಲು ಬರುತ್ತಿದ್ದಾರೆ ಎಂದು ಕಾಗೆ...

ಸರ್ಕಾರಿ ವಾಹನ ಬಳಸಿದ ಶಾಸಕ ರಾಜು ಕಾಗೆ ಪುತ್ರಿ: ನನ್ನನ್ನು ಕರೆಯಲು ಬರುತ್ತಿದ್ದಾರೆ ಎಂದು ಕಾಗೆ ಸಮರ್ಥನೆ.

ವರದಿ :ಸ್ಟೀಫನ್ ಜೇಮ್ಸ್.

ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ಕಾಗವಾಡ ಶಾಸಕರೂ

ಆಗಿರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ(ಎನ್‌ಡಬ್ಲ್ಯುಕೆಆರ್‌ಟಿಸಿ) ಅಧ್ಯಕ್ಷ ರಾಜು(ಭರಮಗೌಡ) ಕಾಗೆ ಅವರ ಪುತ್ರಿ ತೃಪ್ತಿ ಅವರು, ಸರ್ಕಾರಿ ವಾಹನವನ್ನು ಖಾಸಗಿ ಉದ್ದೇಶಕ್ಕೆ ಬಳಸಿದ ವಿಡಿಯೊ ಭಾನುವಾರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ರಾಜು ಕಾಗೆ ಎನ್‌ಡಬ್ಲ್ಯುಕೆಆರ್‌ಟಿಸಿಯವರು ನೀಡಿದ ಕಾರು ಬಳಸಿ, ಚಿಕ್ಕೋಡಿ ಪಟ್ಟಣದಲ್ಲಿ ತೃಪ್ತಿ ಅವರು ಸುತ್ತಾಡುತ್ತಿರುವ ದೃಶ್ಯ ಜಾಲತಾಣದಲ್ಲಿ ಹರಿದಾಡುತ್ತಿವೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ರಾಜು ಕಾಗೆ, ‘ನನ್ನನ್ನು ಕರೆದುಕೊಂಡು ಹೋಗಲು ಚಾಲಕನೊಂದಿಗೆ ಪುತ್ರಿ ಬೆಳಗಾವಿಗೆ ಬರುತ್ತಿದ್ದ ವೇಳೆ ಯಾರೋ ಚಿತ್ರೀಕರಣ ಮಾಡಿದ್ದಾರೆ. ಸರ್ಕಾರಿ ವಾಹನವನ್ನು ಅವಳು ದುರ್ಬಳಕೆ ಮಾಡಿಕೊಂಡಿಲ್ಲ’ ಎಂದು ಹೇಳಿದ್ದಾರೆ

RELATED ARTICLES
- Advertisment -
Google search engine

Most Popular