Friday, April 18, 2025
Google search engine

Homeರಾಜಕೀಯಸಿದ್ಧರಾಮಯ್ಯ ಬಗ್ಗೆ ಶಾಸಕ ಶ್ರೀವತ್ಸ ಹೇಳಿಕೆ ಅಕ್ಷಮ್ಯ,ಬಾಲಿಷವಾದದ್ದು:ಎಂ.ಕೆ ಸೋಮಶೇಖರ್ ಕಿಡಿ

ಸಿದ್ಧರಾಮಯ್ಯ ಬಗ್ಗೆ ಶಾಸಕ ಶ್ರೀವತ್ಸ ಹೇಳಿಕೆ ಅಕ್ಷಮ್ಯ,ಬಾಲಿಷವಾದದ್ದು:ಎಂ.ಕೆ ಸೋಮಶೇಖರ್ ಕಿಡಿ

ಮೈಸೂರು: ಸಿದ್ದರಾಮಯ್ಯ ಅವರು ದೆಹಲಿ ಸಿಎಂ ಅರವಿಂದ ಕೇಜ್ರೀವಾಲ್ ತರ ಜೈಲಿನಲ್ಲಿ ಕೂತು ಆಡಳಿತ ನಡೆಸುತ್ತಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಶಾಸಕ ಶ್ರೀವತ್ಸಗೆ ಮಾಜಿ ಶಾಸಕ ಎಂ.ಕೆ ಸೋಮಶೇಖರ್ ತಿರುಗೇಟು ಕೊಟ್ಟಿದ್ದಾರೆ.

ಇಂದು ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಎಂ.ಕೆ ಸೋಮಶೇಖರ್, ಶ್ರೀವತ್ಸ ಅವರ ಹೇಳಿಕೆ ಅಕ್ಷಮ್ಯ, ಬಾಲಿಷವಾದದ್ದು. ಇದು ಇವರ ಕೊಳಕು ಮನಸ್ಥಿತಿಯನ್ನ ತೋರಿಸುತ್ತದೆ. ಈ ಕೂಡಲೇ ಸಿಎಂ ಸಿದ್ದರಾಮಯ್ಯ ಅವರನ್ನು ಶ್ರೀವತ್ಸ ಕ್ಷಮೆ ಕೇಳಬೇಕು. ಅವರ ಬಗ್ಗೆ ಮಾತಾಡುವ ನೈತಿಕತೆ ಇವರಿಗಿಲ್ಲ ಎಂದು ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯ ಒಬ್ಬ ಪ್ರಾಮಾಣಿಕ ಮುಖ್ಯಮಂತ್ರಿ. ಅವರಿಗೆ ಇದುವರೆಗೂ ಮೈಸೂರಿನಲ್ಲಿ ಒಂದು ಸ್ವಂತ ಮನೆ ಇಲ್ಲ. ಬಿಜೆಪಿಯಲ್ಲಿರುವ ಶಾಸಕ, ಸಂಸದರ ಮೇಲೆ ತನಿಖೆ ಮಾಡಿದ್ರೆ ನೂರಕ್ಕೆ 95 ರಷ್ಟು ಭ್ರಷ್ಟರೇ ಇದ್ದಾರೆ. ಇವರ ಮಾತನ್ನು ಈ ಕೂಡಲೇ ವಾಪಸ್ ಪಡೆಯಬೇಕು. ಇವರು ಮಾಡುವ ಕೆಲಸವನ್ನು ಬಿಟ್ಟು ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಖಂಡನೀಯ ಎಂದು ವಾಗ್ದಾಳಿ ನಡೆಸಿದರು.

RELATED ARTICLES
- Advertisment -
Google search engine

Most Popular