Friday, April 4, 2025
Google search engine

Homeಸ್ಥಳೀಯಶಾಸಕ ತನ್ವೀರ್ ಸೇಠ್ ಸಹೋದರ ಆದಿಲ್ ಸೇಠ್ ನಿಧನ

ಶಾಸಕ ತನ್ವೀರ್ ಸೇಠ್ ಸಹೋದರ ಆದಿಲ್ ಸೇಠ್ ನಿಧನ

ಮೈಸೂರು : ಶಾಸಕ ತನ್ವೀರ್ ಸೇಠ್ ಸಹೋದರ ಹಾಗೂ ಮಾಜಿ ಸಚಿವ ದಿವಂಗತ ಅಜೀಜ್ ಸೇಠ್ ಅವರ ಪುತ್ರ ಆದಿಲ್ ಸೇಠ್ (೭೪) ನಿನ್ನೆ ನಿಧನರಾಗಿದ್ದಾರೆ.

ಮೃತರು ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥೀವ ಶರೀರವನ್ನು ಉದಯಗಿರಿಯ ಶಾಸಕ ತನ್ವೀರ್ ಸೇಟ್ ನಿವಾಸದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು. ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಸೇರಿದಂತೆ ಹಲವರು ಅಂತಿಮ ದರ್ಶನ ಪಡೆದರು.

ಸಂಜೆ ಬಡೇಮಖಾನ್ ರಸ್ತೆಯಲ್ಲಿರುವ ದೊಡ್ಡ ಖಬ್ರಸ್ಥಾನ್ ನಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular