Friday, April 18, 2025
Google search engine

Homeರಾಜ್ಯಸುದ್ದಿಜಾಲಆಟೋ ರಿಕ್ಷಾ ಚಾಲಕರಿಗೆ ಮೀಟರ್ ಮುದ್ರೆ ನೀಡುವ ವ್ಯವಸ್ಥೆ ಕಲ್ಪಿಸಿಕೊಡುವಂತೆ ಶಾಸಕ ವೇದವ್ಯಾಸ ಕಾಮತ್ ಆಗ್ರಹ

ಆಟೋ ರಿಕ್ಷಾ ಚಾಲಕರಿಗೆ ಮೀಟರ್ ಮುದ್ರೆ ನೀಡುವ ವ್ಯವಸ್ಥೆ ಕಲ್ಪಿಸಿಕೊಡುವಂತೆ ಶಾಸಕ ವೇದವ್ಯಾಸ ಕಾಮತ್ ಆಗ್ರಹ

ಮಂಗಳೂರು (ದಕ್ಷಿಣ ಕನ್ನಡ): ರಾಜ್ಯ ವಿಧಾನಸಭೆಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಂಗಳೂರು ನಗರದ ಆಟೋ ರಿಕ್ಷಾ ಚಾಲಕರು ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದು ಕೂಡಲೇ ಅನುಕೂಲ ಕಲ್ಪಿಸುವಂತೆ ಶಾಸಕ ವೇದವ್ಯಾಸ ಕಾಮತ್ ಅವರು ಆಗ್ರಹಿಸಿದ್ದಾರೆ.

ಮಂಗಳೂರು ನಗರದಲ್ಲಿ ದುಡಿಯುತ್ತಿರುವ ಸಾವಿರಾರು ರಿಕ್ಷಾ ಚಾಲಕರು ಮೀಟರ್ ಮುದ್ರೆಗಾಗಿ ಹೊರ ವಲಯದ ದೂರದ ಕುಲಶೇಖರಕ್ಕೆ ಹೋಗಬೇಕಾಗಿದೆ. ಅಲ್ಲೂ ಕೂಡಾ ಸರತಿ ಸಾಲಲ್ಲಿ ನಿಲ್ಲಬೇಕಾಗಿದ್ದು ಎಲ್ಲರಿಗೂ ಮೀಟರ್ ಮುದ್ರೆ ಸಿಗದೇ ಹಲವರು ವಾಪಾಸ್ ಮರಳಿ ಬರುವ ಪರಿಸ್ಥಿತಿಯಿದೆ. ಹೀಗಾಗಿ ನಗರದ ಕೇಂದ್ರ ಭಾಗದಲ್ಲಿರುವ ಮಂಗಳೂರಿನ ಆರ್ ಟಿ ಓ ಕಚೇರಿಯಲ್ಲೇ ವಾರಕ್ಕೆ ಎರಡು ಬಾರಿ ಮೀಟರ್ ಮುದ್ರೆ ನೀಡುವ ವ್ಯವಸ್ಥೆ ಕಲ್ಪಿಸಿಕೊಡುವಂತೆ ಶಾಸಕರು ಸರ್ಕಾರವನ್ನು ಆಗ್ರಹಿಸಿದರು.

ಆಟೋ ಚಾಲಕರ ಈ ನ್ಯಾಯಯುತ ಬೇಡಿಕೆಗೆ ಸ್ಪಂದಿಸುವಂತೆ ಶಾಸಕರು ಇತ್ತೀಚೆಗೆ ಸಾರಿಗೆ ಸಚಿವ
ರಾಮಲಿಂಗ ರೆಡ್ಡಿಯವರಿಗೂ ಸಹ ಮನವಿ ಸಲ್ಲಿಸಿದ್ದರು.

RELATED ARTICLES
- Advertisment -
Google search engine

Most Popular