ಮಂಗಳೂರು (ದಕ್ಷಿಣ ಕನ್ನಡ) ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಗುಲಾಬಿ ಎಂಬ ವಯೋವೃದ್ದರ ಚಿಂತಾಜನಕ ಪರಿಸ್ಥಿತಿಗೆ ಮುಕ್ತಿ ಸಿಕ್ಕಿದೆ.
ಇಂದು ಅಶಕ್ತ ಅಜ್ಜಿಯವರ ಮನೆಗೆ ಭೇಟಿ ನೀಡಿದ ಶಾಸಕ ಉಮಾನಾಥ್ ಕೋಟ್ಯಾನ್, ವೈದ್ಯಾಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿ ವೃದ್ದೆಯನ್ನು ಆಸ್ಪತ್ರೆ ಸಾಗಿಸಿ ಮಲಿನವಾಗಿದ್ದ ಪರಿಸರವನ್ನು ಶುಚಿಯಾಗಿರಿಸಲು ನಿರ್ದೇಶನ ನೀಡಿ ವೃದ್ದೆಯ ಆರೋಗ್ಯ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಲಭಿಸುವಂತೆ ನೋಡಿಕೊಂಡ್ರು.
ಈ ಕಾರ್ಯದಲ್ಲಿ ಜಿಲ್ಲಾಪಂಚಾಯತ್ ಮಾಜಿ ಸದಸ್ಯ ರಿತೇಶ್ ಶೆಟ್ಟಿ, ಮಂಡಲ ರೈತಮೋರ್ಚಾದ ಮಂಡಲ ಅಧ್ಯಕ್ಷ ರಾಜೇಶ್ ಅಮೀನ್, ಬಜಪೆ ಮಹಾಶಕ್ತಿಕೇಂದ್ರದ ಅಧ್ಯಕ್ಷ ವಿಜಯ್ ಅಮೀನ್, ಬಿಜೆಪಿ ಮುಖಂಡ ಲೋಕೇಶ್ ಪೂಜಾರಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಜೊತೆಯಾಗಿದ್ದರು.