ಬೆಂಗಳೂರು : ಉಪ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಹರಕು ಬಾಯಿ ಕಾರಣ. ಹಾಗಾಗಿ ಶಾಸಕ ಯತ್ನಾಳ್ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ಮಾಜಿ ಶಾಸಕರು ಕುರುಡುಮಲೆಯ ವಿನಾಯಕನ ದರ್ಶನ ಪಡೆಯುತ್ತೇವೆ. ಪಕ್ಷದ ಕಾರ್ಯಕರ್ತರು ಮುಖಂಡರಿಗೆ ವಿಶ್ವಾಸ ಹೆಚ್ಚಿಸಲು ಪ್ರವಾಸ ಕೈಗೊಳ್ಳಲಾಗಿದೆ. ರಾಜ್ಯದ ಬಿಜೆಪಿಯಲ್ಲಿ ಕೆಲವರು ಗೊಂದಲವನ್ನು ಸೃಷ್ಟಿ ಮಾಡುತ್ತಿದ್ದಾರೆ. ಎಲ್ಲ ಗೊಂದಲಗಳಿಗೆ ತೆರೆ ಎಳೆಯಬೇಕು ಎಂದರು.
ನಿನ್ನೆ ಮೊನ್ನೆ ಬಂದು ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಸ್ವಯಂ ಘೋಷಿತವಾಗಿ ಯತ್ನಾಳ್ ಅವರು ಹಿಂದೂ ಹುಲಿ ಎಂದು ಹೇಳುತ್ತಾರೆ. ನಿನ್ನೆ ಮಾಜಿ ಸಿಎಂ ಪ್ರಧಾನಿ ಗೌಡರ ಬಗ್ಗೆ ಏನೇನೋ ಹೇಳಿದ್ದಾರೆ. ದಾವಣಗೆರೆಯಲ್ಲಿ ಬೃಹತ್ ಸಮಾವೇಶ ಮಾಡುತ್ತೇವೆ.
ಯತ್ನಾಳ್ ಬಣ ಕಾಂಗ್ರೆಸ್ ಏಜೆಂಟರು. ಬೀದಿಯಲ್ಲಿ ತಮಟೆ ಹೊಡೆಯುತ್ತಿದ್ದಾರೆ. ಇದನ್ನು ಸಹಿಸುವುದಿಲ್ಲ ಎಂದರು.
ಪ್ರಧಾನಿ ಮೋದಿಗೆ ಸಲಹೆ ಕೊಡುವಷ್ಟು ದೊಡ್ಡವರಾಗಿದ್ದಾರಾ? ವಕ್ಫ್ ವಿರುದ್ಧದ ಹೋರಾಟಕ್ಕಾಗಿ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ ದೆಹಲಿಗೆ ಹೋಗಿದ್ದು. ನಿಮ್ಮ ಉದ್ದೇಶ ಏನು? ನೀವೇನು ಹಿಟ್ಲರ್ ಸದ್ದಾಮ್ ಹುಸೇನಾ? ಮಾಜಿ ಸಿಎಂ ಸದಾನಂದ ಗೌಡ ಬಗ್ಗೆ ಬಿಚ್ಚಿಡುತ್ತೇನೆ ಎಂದಿದ್ದಾರೆ. ಧೈರ್ಯ ತಾಕತ್ ಇದ್ದರೆ ಬಿಚ್ಚಿಡು ಎಂದು ಸವಾಲು ಹಾಕಿದರು.
ಯತ್ನಾಳ್ಗೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಸುಪಾರಿ ಕೊಟ್ಟಿದ್ದಾರೆ. ಪಕ್ಷದಲ್ಲಿ ಮುಜುಗರ ಉಂಟು ಮಾಡೋಕೆ ಸುಪಾರಿ ಕೊಟ್ಟಿದ್ದಾರೆ.ಶಾಸಕ ಯತ್ನಾಳ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಕಾಂಗ್ರೆಸ್ನ ಪ್ರಭಾವಿ ಸಚಿವರ ಜೊತೆ ಸೇರಿಸಿಕೊಂಡು ಸೋಲಿಸಿದ್ದೀರಿ ಮೂರೂ ಕ್ಷೇತ್ರದಲ್ಲಿ ಸೋಲಲು ನೀವೇ ಕಾರಣ ಎಂದು ಮಾಜಿ ಸಚಿವ ರೇಣುಕಾಚಾರ್ಯ ಆಕ್ರೋಶ ಹೊರಹಾಕಿದರು.