ಮದ್ದೂರು : ಶಿಕ್ಷಕರ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾದ ಕೆ ವಿವೇಕಾನಂದ ಅವರು ಮದ್ದೂರು ತಾಲೂಕಿನ ತಮ್ಮ ಸ್ವಗ್ರಾಮ ಅವ್ವೇರಹಳ್ಳಿ ಗ್ರಾಮಕ್ಕೆ ಮೊದಲ ಬಾರಿಗೆ ಭೇಟಿ ನೀಡಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.
ಪ್ರಥಮ ಬಾರಿಗೆ ಗ್ರಾಮಕ್ಕೆ ಭೇಟಿ ನೀಡಿದ ಎಂ.ಎಲ್.ಸಿ ಕೆ ವಿವೇಕನಂದ ಅವರನ್ನು ಗ್ರಾಮಸ್ಥರು ಹೂಗುಚ್ಚ ನೀಡಿ ಅದ್ದೂರಿಯಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಯೋಗೇಶ್ ಜೈ ಕುಮಾರ್, ಶಂಕರೇಗೌಡ, ರಾಘವೇಂದ್ರ,. ಡಾ. ಮಧು, ದೇವರಾಜ್, ಶ್ರೀಕಾಂತ್, ದೊರೆಸ್ವಾಮಿ, ಮರಿಕಾಳೇಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.