Thursday, April 3, 2025
Google search engine

HomeಅಪರಾಧಕಾನೂನುMLC ರಾಜೇಂದ್ರ ಹತ್ಯೆ ಕೇಸ್ : ಆರೋಪಿ ಗುಂಡನ ಪ್ರೇಯಸಿ ಯಶೋಧ ಪೊಲೀಸ್ ವಶಕ್ಕೆ!

MLC ರಾಜೇಂದ್ರ ಹತ್ಯೆ ಕೇಸ್ : ಆರೋಪಿ ಗುಂಡನ ಪ್ರೇಯಸಿ ಯಶೋಧ ಪೊಲೀಸ್ ವಶಕ್ಕೆ!

ಬೆಂಗಳೂರು : ರಾಜ್ಯದಲ್ಲಿ ಸಚಿವ ಕೆ.ಎನ್ ರಾಜಣ್ಣ ಮೇಲೆ ಹನಿಟ್ರ್ಯಾಪ್ ಗೆ ಯತ್ನಿಸಲಾಗಿತ್ತು ಎಂಬ ಆರೋಪ ಕೇಳಿಬಂದಿತ್ತು. ಆದರೆ ಹನಿಟ್ರ್ಯಾಪ್ ಬದಲಾಗಿ ಕೊಲೆಗೆ ಸಂಚು ರೂಪಿಸಿದ್ದರು ಎನ್ನುವ ಆಡಿಯೋ ಇದೀಗ ಸೋರಿಕೆಯಾಗಿದೆ. ಹತ್ಯೆ ಸುಪಾರಿಗೆ ಸಂಬಂಧಿಸಿದಂತೆ ಇದೀಗ ಪೊಲೀಸರು ರಾಜೇಂದ್ರ ಅವರ ಭೇಟಿಗೆ ಯತ್ನಿಸಿದ ಮಹಿಳೆ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಮತ್ತೋರ್ವ ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಆರೋಪಿ ಗುಂಡನ ಲವರ್ ಯಶೋಧಾಳನ್ನು ಖಾಕಿ ವಶಕ್ಕೆ ಪಡೆದುಕೊಂಡಿದೆ. ಯಶೋಧಳನ್ನು ವಶಕ್ಕೆ ಪಡೆದು ಬೆನ್ನಲ್ಲೇ ಆರೋಪಿ ಗುಂಡಾ ಪರಾರಿಯಾಗಿದ್ದಾನೆ ಸೋಮನ ಸಹಚರ ಗುಂಡನಿಗಾಗಿ ಇದೀಗ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಇತ್ತೀಚೆಗೆ, ರಾಜೇಂದ್ರ ಅವರ ಸುಪಾರಿಗೆ ಸಂಬಂಧಿಸಿದಂತೆ 18 ನಿಮಿಷಗಳ ಟೆಲಿಫೋನ್ ಸಂಭಾಷಣೆಯೊಂದು ಲೀಕ್ ಆಗಿತ್ತು. ಅತ್ತ, ರಾಜೇಂದ್ರ ಅವರು ತಮಗೆ ಸಿಕ್ಕಿರುವ ಕೆಲವು ಸಾಕ್ಷ್ಯಾಧಾರಗಳನ್ನು ಸೇರಿಸಿಕೊಂಡು ತುಮಕೂರು ಎಸ್ಪಿಯವರಿಗೆ ದೂರು ನೀಡಿದ್ದರು. ಆ ಹಿನ್ನೆಲೆಯಲ್ಲಿ, ತನಿಖೆ ನಡೆಸಿರುವ ಪೊಲೀಸರು ಓರ್ವ ಮಹಿಳೆ ಸೇರಿ ಮೂವರನ್ನು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

RELATED ARTICLES
- Advertisment -
Google search engine

Most Popular