ಹನೂರು: ಚಿರತೆ ದಾಳಿಯಿಂದ ಬಾಲಕಿ ಮೃತ್ಯು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಗ್ಗಲಿಗುಂದಿ ಗ್ರಾಮಕ್ಕೆ ಶಾಸಕ ಎಂ ಆರ್ ಮಂಜುನಾಥ್ ನೀಡಿ ಬಾಲಕಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಹನೂರು ತಾಲ್ಲೂಕಿನ ಕಗ್ಗಲಿಗುಂದಿ ಗ್ರಾಮಕ್ಕೆ ಎಂ ಆರ್ ಮಂಜುನಾಥ್ ಅವರು ಭೇಟಿ ನೀಡಿ ಚಿರತೆ ದಾಳಿಗೆ ತುತ್ತಾದ ಬಾಲಕಿ ಸುಶೀಲಾ ಮನೆಗೆ ಭೇಟಿ ನೀಡಿ ಸಾಂತ್ವನ ತಿಳಿಸಿದರು.
ಈ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಬಾಲಕಿಯ ಸಾವು ದುರಾದೃಷ್ಟಕರ ಸಂಗತಿಯಾಗಿದೆ ಎಂದು ಕಂಬನಿ ಮಿಡಿದರು.
ಇನ್ನೂ ಮೃತ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ 5ಲಕ್ಷ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ಮಾತನಾಡಿದ ಸ್ಥಳೀಯ ವಾಸಿಗಳು, ಕಳೆದ ವರ್ಷಗಳ ಸುಮಾರು ಅನಾದಿಕಾಲದಿಂದಲೂ ನಾವು ಈ ಭಾಗದಲ್ಲಿ ನಾವು ವಾಸವಿದ್ದೇವೆ. ಆದರೆ ಒಂದು ಬಾರಿ ಸಹ ಕಾಡು ಪ್ರಾಣಿಗಳ ಹಾವಳಿ ಆಗಿರಲಿಲ್ಲ. ಇದು ಅನ್ಯ ಕಡೆಯಿಂದ ಬಂದಿರುವಂತಹ ಚಿರತೆಯಾಗಿದ್ದು, ಕೂಡಲೇ ಸೆರೆ ಹಿಡಿಯುವಂತೆ ಒತ್ತಾಯವನ್ನು ಮಾಡಿದ್ದಾರೆ.
ಈ ವೇಳೆ ಡಿಸಿಎಫ್ ದೀಪಾ ಕಂಟ್ರಾಕ್ಟರ್,ಪರಿಶಿಷ್ಟ ಕಲ್ಯಾಣಾಧಿಕಾರಿ ಮಂಜುಳಾ ಬಿಇಒ ಶಿವರಾಜ್ ತಾಪಂ ಇಒ ಶ್ರೀನಿವಾಸ್ ಸೋಲಿಗರ ಸಂಘದ ಪಧಾಧಿಕಾರಿಗಳು ವಿವಿಧ ಶಾಲಾ ಶಿಕ್ಷಕರು ಹಾಜರಿದ್ದರು.