Tuesday, April 22, 2025
Google search engine

Homeಸ್ಥಳೀಯಮೋದಿ ವಿಶ್ವನಾಯಕರು. ಜೆಡಿಎಸ್ ಜೊತೆ ಯಾಕೆ ಮೈತ್ರಿ ಮಾಡಿಕೊಂಡಿದ್ದಾರೆ: ಸಚಿವ ಕೆ.ವೆಂಕಟೇಶ್

ಮೋದಿ ವಿಶ್ವನಾಯಕರು. ಜೆಡಿಎಸ್ ಜೊತೆ ಯಾಕೆ ಮೈತ್ರಿ ಮಾಡಿಕೊಂಡಿದ್ದಾರೆ: ಸಚಿವ ಕೆ.ವೆಂಕಟೇಶ್

ಮೈಸೂರು : ಡಿ.ಕೆ.ಸುರೇಶ್ ಒಬ್ಬರೇ ನಮ್ಮ ರಾಜ್ಯದ ಪರವಾಗಿ ಮಾತನಾಡುತ್ತಿದ್ದಾರೆ. ಬೇರೆ ಯಾವ ಸಂಸದರು ಮಾತನಾಡುತ್ತಿಲ್ಲ. ಕೊಡಗು ಮೈಸೂರು ಜಿಲ್ಲೆಯಲ್ಲಿ ನಮ್ಮ ಅಭ್ಯರ್ಥಿಯನ್ನ ಗೆಲ್ಲಿಸುವ ಅನಿರ್ವಾತೆ ನಮ್ಮ ಮೇಲಿದೆ ಎಂದು ಹುಣಸೂರಿನಲ್ಲಿ ನಡೆಯುತ್ತಿರುವ ಸಮಾವೇಶದಲ್ಲಿ ಸಚಿವ ಕೆ.ವೆಂಕಟೇಶ್ ಹೇಳಿದರು. ಮಂಜುನಾಥ್ ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಬಿಜೆಪಿ ಜೆಡಿಎಸ್ ಒಂದಾಗಿದ್ದಾರೆ. ಯದುವೀರ್ ಗೆದ್ದಾಗಿದೆ ಅಂದುಕೊಂಡಿದ್ದಾರೆ. ಎಲ್ಲರೂ ನಮ್ಮನ್ನು ಕೇಳುತ್ತಾರೆ. ನಾನು ಸಹ ಹೇಳುತ್ತೇನೆ ನಮ್ಮ ಅಭ್ಯರ್ಥಿ ಗೆದ್ದೆ ಗೆಲ್ಲುತ್ತಾರೆ ಎಂದರು.

ಮೋದಿ ವಿಶ್ವನಾಯಕರು. ವಿಶ್ವ ನಾಯಕರು ಜೆಡಿಎಸ್ ಜೊತೆ ಯಾಕೆ ಮೈತ್ರಿ ಮಾಡಿಕೊಂಡಿದ್ದಾರೆ. ಜೆಡಿಎಸ್ ಪಕ್ಷ ಇಡೀ ರಾಜ್ಯದಲ್ಲಿದ್ಯ ಬರಿ ಮೂರು ಜಿಲ್ಲೆಯಲ್ಲಿ ಮಾತ್ರ ಇದೆ. ಬಿಜೆಪಿಯವರು ಜೆಡಿಎಸ್ ಗೆ ಕೇವಲ ಮೂರು ಸೀಟ್ ಕೊಟ್ಟಿದ್ದಾರೆ. ಜೆಡಿಎಸ್ ನವರು ಅವಕಾಶವಾದಿಗಳು. ಡಾ.ಮಂಜುನಾಥ್ ಅವರನ್ನ ಜೆಡಿಎಸ್ ನಿಂದಲೇ ಟಿಕೆಟ್ ಕೊಡಬಹುದಿತ್ತು. ಜೆಡಿಎಸ್ ಪಕ್ಷ ಅಸ್ತಿತ್ವಕ್ಕೆ ಹೋರಾಟ ಮಾಡುತ್ತಿದ್ದಾರೆ. ಮೈತ್ರಿ ಕಳ್ಳಬೆರಿಕೆ, ಅವರನ್ನು ಬೆಂಬಲಬೇಡಿ. ಮೈಸೂರು ಕ್ಷೇತ್ರವನ್ನ ಸೋತರೆ ಸಿಎಂಗೆ ಅವಮಾನ ಆಗುತ್ತೆ. ಕೆಟ್ಟ ಮೇಸೆಜ್ ಹೋಗುತ್ತೆ. ಸಿಎಂ ಮೈಸೂರಿನವರೇ ಆಗಿದ್ದಾರೆ ಹೀಗಾಗಿ ಮೈಸೂರು ಕ್ಷೇತ್ರವನ್ನ ಗೆಲ್ಲಿಸಿ ಎಂದು ಹೇಳಿದರು.

ಹುಣಸೂರು ಕ್ಷೇತ್ರದಲ್ಲಿ ೫೦ ಸಾವಿರ ಲೀಡ್ ಕೊಡ್ಸಿ ಮಂಜುನಾಥ್ ಎಂಎಲ್ಸಿ ಮಾಡುತ್ತೇವೆ. ವೇದಿಕೆ ಮೇಲೆಯೇ ಸಚಿವ ಕೆ.ವೆಂಕಟೇಶ್ ಓಪನ್ ಆಫರ್ ಕೊಟ್ಟರು. ಎಂಎಲ್ಸ್ ಮಾಡಲು ಮುಂದೆ ಟೈಮ್ ಬರಬೇಕು ತಡಿಯಪ್ಪ. ಈಗ ಕೂಗಿದರೇ ಎಂಎಲ್ಸಿ ಆಗಿಲ್ಲ. ಹುಣಸೂರು ಕ್ಷೇತ್ರದಿಂದ ೫೦ ಸಾವಿರ ಲೀಡ್ ಕೊಡ್ಸಿ ಮಂಜುನಾಥ್‌ಗೆ ಎಂಎಲ್ಸಿ ಮಾಡುತ್ತೇವೆ. ನೀವು ೫೦ ಸಾವಿರ ಲೀಡ್ ಕೊಡ್ಸಿ ಅಂಥಾನೇ ನಾನು ಕೇಳುತ್ತಿರುವುದು. ಇಷ್ಟು ಜನ ಸೇರಿದ್ದೀರಿ, ಆದ್ರೂ ಮಂಜಾ ಯಾಕೆ ಸೋತಾ ಅನ್ನೊದೇ ನನಗೆ ಅನುಮಾನ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular