Friday, April 4, 2025
Google search engine

Homeರಾಜ್ಯನಮ್ಮ ಗ್ಯಾರಂಟಿಗಳನ್ನು ಮೋದಿ ಕಾಪಿ ಮಾಡುತ್ತಿದ್ದಾರ: ಎಂ.ಬಿ ಸಚಿವ ಪಾಟೀಲ್

ನಮ್ಮ ಗ್ಯಾರಂಟಿಗಳನ್ನು ಮೋದಿ ಕಾಪಿ ಮಾಡುತ್ತಿದ್ದಾರ: ಎಂ.ಬಿ ಸಚಿವ ಪಾಟೀಲ್

ವಿಜಯಪುರ: ನಮ್ಮ ಗ್ಯಾರಂಟಿಗಳನ್ನು ಮೋದಿ ಕಾಪಿ ಮಾಡುತ್ತಿದ್ದಾರೆ. ನಮ್ಮ ಗ್ಯಾರಂಟಿ ನಡೆಯಲ್ಲ ಎಂದರೆ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡುತ್ತಿರೋದು ಯಾಕೆ? ಎಂದು ಸಚಿವ ಎಂ.ಬಿ ಪಾಟೀಲ್ ಪ್ರಶ್ನಿಸಿದ್ದಾರೆ.

ಜಿಲ್ಲೆಯಲ್ಲಿ ಸುದ್ದಿಗಾರರೊಂದಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕಿಯಿಸಿದ ಅವರು, ಬಡವರಿಗೆ, ಮಹಿಳೆಯರಿಗೆ ಸಶಕ್ತರನ್ನಾಗಿ ಮಾಡಲು ನಾವು ಗ್ಯಾರಂಟಿ ಕೊಟ್ಟಿದ್ದೇವೆ. ಅವುಗಳು ಮುಂದುವರಿಯಲಿವೆ, ಅಭಿವೃದ್ಧಿ ಕೂಡ ಆಗಲಿದೆ ವಾಗ್ದಾಳಿ ನಡೆಸಿದ್ದಾರೆ. ಕೆಲ ತಿಂಗಳಿನಿಂದ ಗೃಹಲಕ್ಷ್ಮೀ ಹಣ ಪಾವತಿ ಇಲ್ಲ ಎಂಬ ವಿಚಾರವಾಗಿ, ಈ ಕುರಿತು ಚರ್ಚೆ ಮಾಡಲಾಗುತ್ತದೆ. ಗೃಹಲಕ್ಷ್ಕೀ ಯೋಜನೆಯನ್ನು ಉಳ್ಳವರು ತೆಗೆದುಕೊಳ್ಳಬಾರದು, ಬಡವರಿಗೆ ಹೋಗಬೇಕು. ಬಡವರು ಉಳಿದರೆ ಅವರಿಗೂ ಸಿಗಬೇಕು, ಆದರೆ ಶ್ರೀಮಂತರು, ಉಳ್ಳವರು ತಾವೇ ಬಿಟ್ಟು ಹೋಗಬೇಕು. ಇಲ್ಲವಾದರೆ ಸರ್ಕಾರ ಶ್ರೀಮಂತರನ್ನು ಗೃಹಲಕ್ಷ್ಮೀ ಯೋಜನೆಯಿಂದ ತೆಗೆದುಹಾಕಬೇಕು ಎಂದು ಹೇಳಿದರು.

ಜಾತಿ ಗಣತಿ ವಿಚಾರವಾಗಿ ಮಾತನಾಡಿದ ಅವರು, ಇದಕ್ಕೆ ಯಾರ ವಿರೋಧ ಇಲ್ಲ. ಯಾವುದೇ ಜಾತಿಗಳ ಜನರಿಗೆ ಅನ್ಯಾಯ ಆಗಬಾರದು. ಯಾರೇ ಇರಲಿ ಅನ್ಯಾಯ ಆಗಬಾರದು. ನಮ್ಮಲ್ಲಿಯೂ ಗೊಂದಲಗಳಿವೆ. ನಮ್ಮ ಉಪ ಪಂಗಡಗಳು ಹಿಂದೂ ಸಾದರ, ಹಿಂದೂ ಬಣಜಿಗ ಹಾಗೂ ಇತರೆ ಕೆಲಜಾತಿಯವರು 2ಎ ಬರೆಯಿಸಿದ್ದಾರೆ. ಜಾತಿಗಣತಿ ಕುರಿತ ನಾವು ರಿಪೋರ್ಟ್ ನೋಡಿಲ್ಲ. ನೋಡಿದ ಬಳಿಕ ಮಾತನಾಡಬೇಕು ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular