Sunday, April 20, 2025
Google search engine

Homeರಾಜ್ಯ2024ರಲ್ಲಿ ಮತ್ತೊಮ್ಮೆ ಮೋದಿ ಖಚಿತ: ಶಾಸಕ ಕಾಮತ್

2024ರಲ್ಲಿ ಮತ್ತೊಮ್ಮೆ ಮೋದಿ ಖಚಿತ: ಶಾಸಕ ಕಾಮತ್

ಮಂಗಳೂರು(ದಕ್ಷಿಣ ಕನ್ನಡ): 2024ರ ಲೋಕಸಭಾ ಚುನಾವಣೆಯ ಸಿದ್ಧತೆಯ ಭಾಗವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಹಾಗೂ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ರವರ ಸೂಚನೆಯಂತೆ ದೇಶ ರಾಜ್ಯದೆಲ್ಲೆಡೆ “ಮತ್ತೊಮ್ಮೆ ಮೋದಿ” ಗೋಡೆ ಬರಹ ಅಭಿಯಾನ ಆರಂಭವಾಗಿದ್ದು ಮಂಗಳೂರಿನಲ್ಲಿ ಈ ಅಭಿಯಾನಕ್ಕೆ ಶಾಸಕ ವೇದವ್ಯಾಸ್ ಕಾಮತ್ ಅವರು ಚಾಲನೆ ನೀಡಿದರು.

ಪ್ರತೀ ಬೂತ್ ಗೆ ಕನಿಷ್ಠ ಐದರಂತೆ ಒಟ್ಟಾರೆಯಾಗಿ 1250ಕ್ಕೂ ಹೆಚ್ಚು ಈ ಗೋಡೆಬರಹ ಅಭಿಯಾನ ನಡೆಯಲಿದೆ. ಸುಭದ್ರ ಭಾರತಕ್ಕಾಗಿ ಸಮಗ್ರ ಯೋಜನೆಗಳನ್ನು ಜಾರಿಗೊಳಿಸಿರುವ ಸನ್ಮಾನ್ಯ ಪ್ರಧಾನಿ ಮೋದಿಯವರು ಸಮಸ್ತ ಭಾರತೀಯರ ಗ್ಯಾರಂಟಿಯಾಗಿದ್ದಾರೆ. ಈ ಗೋಡೆ ಬರಹ ಅಭಿಯಾನದಿಂದ ಇಡೀ ರಾಷ್ಟ್ರದಲ್ಲಿ ಒಂದು ರೀತಿಯ ಹೊಸ ಸಂಚಲನ ಮೂಡಲಿದ್ದು ಮುಂದಿನ ಎರಡೂವರೆ ತಿಂಗಳುಗಳ ಕಾಲ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಾದ ನಾವೆಲ್ಲರೂ ಹಗಲು ರಾತ್ರಿ ದುಡಿದು ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿಯ ಲೋಕಸಭಾ ಅಭ್ಯರ್ಥಿಯನ್ನು ಭಾರೀ ಬಹುಮತದಿಂದ ಗೆಲ್ಲಿಸಿ ದೇಶದ ಹೆಮ್ಮೆಯ ನಾಯಕ ಮೋದಿಜಿಯವರನ್ನು ಮೂರನೇ ಬಾರಿ ದೇಶದ ಪ್ರಧಾನಿಯಾಗಿಸುವಲ್ಲಿ ಪಾತ್ರ ನಿರ್ವಹಿಸೋಣ ಎಂದು ಕಾರ್ಯಕರ್ತರಾದಿಯಾಗಿ ಎಲ್ಲರನ್ನೂ ಹುರಿದುಂಬಿಸಿದರು.

ಈ ಸಂದರ್ಭದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮಂಡಲದ ಬಿಜೆಪಿ ಅಧ್ಯಕ್ಷರಾದ ವಿಜಯ ಕುಮಾರ್ ಶೆಟ್ಟಿ, ದಕ್ಷಿಣಕನ್ನಡ ಜಿಲ್ಲಾ ಲೋಕಸಭಾ ಚುನಾವಣಾ ಸಂಚಾಲಕರಾದ ನಿತಿನ್ ಕುಮಾರ್, ರೂಪಾ.ಡಿ.ಬಂಗೇರ, ಮ.ನ.ಪಾ ಸದಸ್ಯಯರಾದ ಪೂರ್ಣಿಮಾ, ಲೀಲಾವತಿ, ಗಣೇಶ್ ಕುಲಾಲ್, ಅಶ್ವಿತ್ ಕೊಟ್ಟಾರಿ, ರಮೇಶ್ ಕಂಡೆಟ್ಟು, ಅಜಯ್, ಕಿರಣ್ ರೈ, ಗೋಡೆ ಬರಹ ಅಭಿಯಾನದ ಜಿಲ್ಲಾ ಸಂಚಾಲಕರಾದ ಮಹೇಶ್ ಜೋಗಿ, ಅರ್ಷದ್ ಪೋಪಿ, ವಿನೋದ್ ಮೆಂಡನ್, ರಮೇಶ್ ಹೆಗ್ಡೆ, ಚರಿತ್ ಪೂಜಾರಿ, ಲಲ್ಲೇಶ್, ಅನಿಲ್ ಹೊಯ್ಗೆ ಬಜಾರ್, ಪೂರ್ಣಿಮಾ ರಾವ್, ಸಚಿನ್, ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular