Friday, April 11, 2025
Google search engine

HomeUncategorizedರಾಷ್ಟ್ರೀಯಮೋದಿ ವಿಶೇಷ ಸಾಧನೆ:‘ಎಕ್ಸ್‌’ ಫಾಲೋವರ್ಸ್‌ 10 ಕೋಟಿ

ಮೋದಿ ವಿಶೇಷ ಸಾಧನೆ:‘ಎಕ್ಸ್‌’ ಫಾಲೋವರ್ಸ್‌ 10 ಕೋಟಿ

ನವದೆಹಲಿ: ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೊಸ ದಾಖಲೆ ಬರೆದಿದ್ದಾರೆ. ಎಕ್ಸ್‌ ಖಾತೆಯಲ್ಲಿ 10 ಕೋಟಿ(‘100 ಮಿಲಿಯನ್) ಫಾಲೋವರ್ಸ್‌ ಹೊಂದುವ ಮೂಲಕ ವಿಶೇಷ ಸಾಧನೆ ಹಾಗೂ ಮೊದಲ ಜಾಗತಿಕ ನಾಯಕ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಜಾಗತಿಕ ನಾಯಕರಾದ ಅಮೆರಿಕ ಅಧ್ಯಕ್ಷ ಜೋ ಬೈಡನ್ 3.81 ಕೋಟಿ , ಪೋಪ್ ಫ್ರಾನ್ಸಿಸ್‌ 1.85 ಕೋಟಿ, ದುಬೈ ಆಡಳಿತಗಾರ ಶೇಖ್‌ ಮೊಹಮ್ಮದ್‌ 1.12 ಕೋಟಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಭಾರತದಲ್ಲಿ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ 2.64 ಕೋಟಿ ,ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್2.75 ಕೋಟಿ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.

ವಿರಾಟ್ ಕೊಹ್ಲಿ, ಬ್ರೆಜಿಲಿಯನ್ ಫುಟ್ಬಾಲ್ ಆಟಗಾರ ನೇಮರ್ ಜೂನಿಯರ್‌, ಅಮೆರಿಕದ ಬಾಸ್ಕೆಟ್‌ಬಾಲ್ ಆಟಗಾರ ಲೆಬ್ರಾನ್ ಜೇಮ್ಸ್, ಹಾಲಿವುಡ್‌ನ ಟೇಲರ್ ಸ್ವಿಫ್ಟ್, ಲೇಡಿ ಗಾಗಾ ಮತ್ತು ಕಿಮ್ ಕರ್ದಶಿಯನ್‌ರತಹ ಸೆಲೆಬ್ರಿಟಿಗಳಿಗಿಂತಲೂ ಮೋದಿ ಮುಂದಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಮೋದಿ, ‘100 ಮಿಲಿಯನ್! ಈ ರೋಮಾಂಚಕ ಮಾಧ್ಯಮದಲ್ಲಿರುವುದಕ್ಕೆ ಸಂತೋಷವಾಗಿದೆ. ಈ ಮಾಧ್ಯಮದಲ್ಲಿ ಚರ್ಚೆ, ಒಳನೋಟಗಳು, ಜನರ ಆಶೀರ್ವಾದ, ರಚನಾತ್ಮಕ ಟೀಕೆಗಳು ಇರುತ್ತವೆ. ಭವಿಷ್ಯದಲ್ಲಿ ಕೂಡ ಈ ಮಾಧ್ಯಮದಲ್ಲಿ ಇದನ್ನೇ ಎದುರು ನೋಡುತ್ತಿದ್ದೇನೆ ಎಂದು ಬರೆದಿದ್ದಾರೆ.


RELATED ARTICLES
- Advertisment -
Google search engine

Most Popular