ಚಿಕ್ಕಬಳ್ಳಾಪುರ: ಸೋಮವಾರ ಅಯೋಧ್ಯೆಯಲ್ಲಿ ರಾಮಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದು ಇದಕ್ಕೂ ಮುನ್ನ ೧೧ ದಿನಗಳ ಕಾಲ ಉಪವಾಸ ಕೈಗೊಂಡು ಅಂತ್ಯಗೊಳಿಸಿದ್ದರು. ಇದೀಗ ಅವರ ಉಪವಾಸದ ಬಗ್ಗೆ ಮಾಜಿ ಸಿಎಂ ವೀರಪ್ಪ ಮೊಯ್ಲಿ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಮಾಜಿ ಸಿಎಂ ವೀರಪ್ಪ ಮೊಯ್ಲಿ, ನರೇಂದ್ರ ಮೋದಿ ಉಪವಾಸ ಮಾಡಿದ್ದೇ ಅನುಮಾನ. ರಾಮಲಲ್ಲಾ ಪ್ರತಿಷ್ಠಾಪನಾ ಕಾರ್ಯಕ್ರಮದ ಅಂಗವಾಗಿ ಮೋದಿ ಉಪವಾಸ ಮಾಡಿಲ್ಲ. ಏಳನೀರು ಮಾತ್ರ ಕುಡಿದು ಉಪವಾಸ ಮಾಡಿದರೆ ಒಂದೆರೆಡು ದಿನದಲ್ಲಿ ಮನುಷ್ಯ ಬೀಳುತ್ತಾನೆ. ೧೧ ದಿನಗಳ ಉಪವಾಸ ಮಾಡಿದರೇ ಮನುಷ್ಯ ಬದುಕಲು ಸಾಧ್ಯವಿಲ್ಲ. ವೈದ್ಯರ ಅಭಿಪ್ರಾಯದ ಪ್ರಕಾರ ಅದು ಅಸಾಧ್ಯ. ಇವರ ನಾಟಕ ಇನ್ನೂ ಮುಂದೆ ನಡೆಯಲ್ಲ ಎಂದು ಟೀಕಿಸಿದ್ದಾರೆ.
ರಾಮಮಂದಿರದ ಕೆಲಸ ಸಂಪೂರ್ಣ ಆಗಲಿಲ್ಲ. ನರೇಂದ್ರ ಮೋದಿ ಪ್ರಾಣ ಪ್ರತಿಷ್ಠಾಪನೆ ನಡೆಸಿಕೊಟ್ಟಿದ್ದು ತಪ್ಪು. ನರೇಂದ್ರ ಮೋದಿ ಗರ್ಭಗುಡಿಗೆ ಪ್ರವೇಶ ಮಾಡಿದ್ದು ಸಹ ತಪ್ಪು. ಅವರ ಕೈಗೆ ಬಾಯಿಗೆ ತೀರ್ಥ ಕೊಡುವುದು ಇದು ಹಿಂದೂ ಧರ್ಮಕ್ಕೆ ಬಂದ ದುಸ್ಥಿತಿ ಎಂದು ವೀರಪ್ಪ ಮೊಯ್ಲಿ ವ್ಯಂಗ್ಯವಾಡಿದ್ದಾರೆ.