Saturday, April 19, 2025
Google search engine

HomeUncategorizedರಾಷ್ಟ್ರೀಯಅಕ್ರಮ ಹಣ ವರ್ಗಾವಣೆ: ದೆಹಲಿ ಸಿಎಂ ಆಪ್ತ ಕಾರ್ಯದರ್ಶಿ, ಕೆಲವು ನಾಯಕರ ಮನೆ ಮೇಲೆ ಇಡಿ...

ಅಕ್ರಮ ಹಣ ವರ್ಗಾವಣೆ: ದೆಹಲಿ ಸಿಎಂ ಆಪ್ತ ಕಾರ್ಯದರ್ಶಿ, ಕೆಲವು ನಾಯಕರ ಮನೆ ಮೇಲೆ ಇಡಿ ದಾಳಿ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಮತ್ತು ಆಮ್ ಆದ್ಮಿ ಪಕ್ಷಕ್ಕೆ (ಎಎಪಿ) ಸಂಪರ್ಕ ಹೊಂದಿರುವ ಕೆಲವು ನಾಯಕರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಮಂಗಳವಾರ ದಾಳಿ ನಡೆಸಿ ಶೋಧ ನಡೆಸಿದೆ.

ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಮತ್ತು ದೆಹಲಿ ಜಲ ಮಂಡಳಿಯ (ಡಿಜೆಬಿ) ಮಾಜಿ ಸದಸ್ಯ ಶಲಭ್ ಕುಮಾರ್ ಅವರ ಮನೆಗಳ ಮೇಲೆ ದಾಳಿ ನಡೆಸಿದ ತಂಡ ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ ಅಲ್ಲದೆ ಆಪ್ ನ ಕೆಲ ನಾಯಕರ ಮನೆಗಳ ಮೇಲೂ ತನಿಖಾ ಸಂಸ್ಥೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಪಕ್ಷದ ರಾಜ್ಯಸಭಾ ಸದಸ್ಯರೂ ಆಗಿರುವ ಆಪ್ ನ ಖಜಾಂಚಿ ಎನ್‌ಡಿ ಗುಪ್ತಾ ಅವರ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ದಾಳಿಯನ್ನು ಖಂಡಿಸಿದ ಆಪ್ ಬಿಜೆಪಿಯ ಒತ್ತಾಯದ ಮೇರೆಗೆ ಆಪ್ ನಾಯಕರ ಮನೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸುತ್ತಿದೆ ಎಂದು ಕಿಡಿಕಾರಿದೆ.

RELATED ARTICLES
- Advertisment -
Google search engine

Most Popular