Saturday, April 19, 2025
Google search engine

Homeಅಪರಾಧಕಾನೂನುಅಕ್ರಮ ಹಣ ವರ್ಗಾವಣೆ: ರಾಂಚಿ ಮತ್ತು ರಾಜಸ್ಥಾನದಲ್ಲಿ ಇಡಿ ದಾಳಿ

ಅಕ್ರಮ ಹಣ ವರ್ಗಾವಣೆ: ರಾಂಚಿ ಮತ್ತು ರಾಜಸ್ಥಾನದಲ್ಲಿ ಇಡಿ ದಾಳಿ

ಹೊಸದಿಲ್ಲಿ: ಜಾರ್ಖಂಡ್‌ ನಲ್ಲಿ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ರಾಂಚಿ ಮತ್ತು ರಾಜಸ್ಥಾನದ 10 ಸ್ಥಳಗಳಲ್ಲಿ ಬೆಳ್ಳಂಬೆಳಗ್ಗೆ ಜಾರಿ ನಿರ್ದೇಶನಾಲಯ (ಇಡಿ)  ದಾಲಿ ನಡೆಸಿದ್ದು, ಶೋಧ ಕಾರ್ಯ ನಡೆಸುತ್ತಿದೆ.

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಪತ್ರಿಕಾ ಸಲಹೆಗಾರ ಅಭಿಷೇಕ್ ಪ್ರಸಾದ್ ಅವರ ನಿವಾಸಕ್ಕೂ ಇಡಿ ಅಧಿಕಾರಿಗಳ ತಂಡ ಧಾವಿಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿರುವುದಾಗಿ ಹೇಳಲಾಗಿದೆ.

ಹಜಾರಿಬಾಗ್ ಉಪ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ದುಬೆ ಮತ್ತು ಸಾಹಿಬ್ ಗಂಜ್ ಜಿಲ್ಲಾಧಿಕಾರಿ ರಾಮ್ ನಿವಾಸ್ ಅವರ ನಿವಾಸದ ಮೇಲೂ ಅಧಿಕಾರಿಗಳು ದಾಳಿ ನಡೆಸಿ ಅಗತ್ಯ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಕಾನೂನುಬಾಹಿರ ವ್ಯವಹಾರಗಳನ್ನು ಸುಗಮಗೊಳಿಸುವಲ್ಲಿ ಮಹತ್ವದ ಪಾತ್ರಗಳನ್ನು ವಹಿಸುತಿದ್ದ ಹಲವಾರು ಮಧ್ಯವರ್ತಿಗಳ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿ ದಾಖಲೆಗಳನ್ನು ಶೋಧಿಸುತ್ತಿದೆ.

RELATED ARTICLES
- Advertisment -
Google search engine

Most Popular