ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಆಸ್ತಿ ಹಣ ಅಂತಸ್ತು ಯಾವುದೋ ನಮ್ಮ ಜೊತೆ ಬರುವುದಿಲ್ಲ ಆದರೆ ನಾವಿರುವಾಗ ಮಾಡಿದ ಸೇವೆ ಶಾಶ್ವತವಾಗಿ ಜನಮನದಲ್ಲಿರುತ್ತದೆ ಎಂದು ಸ್ವಯಂ ನಿವೃತ್ತಿ ಪಡೆದ ಸುದರ್ಶನ್ ಅವರ ಬಗ್ಗೆ ವಿಧಾನ ಪರಿಷತ್ ಸದಸ್ಯ ಬಿ ವಿವೇಕಾನಂದ ಹೇಳಿದರು.
ಪಟ್ಟಣದ ನಿವೃತ್ತ ಉಪನ್ಯಾಶಕ ದಿವಂಗತ ಕೆ.ಆರ್.ಲಕ್ಕೇಗೌಡರ ನಿವಾಸದಲ್ಲಿ ಕೌಶಲ್ಯ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕ ಸುದರ್ಶನ್ ಅವರು ಸ್ವಯಂ ನಿವೃತ್ತಿ ಪಡೆದಿದ್ದರಿಂದ ಅವರನ್ನು ಸನ್ಮಾನಿಸಿ ಮಾತನಾಡಿದ ಅವರು ೧೯೯೮ರಲ್ಲಿ ಸೇವೆಗೆ ಸೇರಿ ೨೬ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಇಂದು ಸ್ವಯಂ ನಿವೃತ್ತಿಯಾಗಿದ್ದಾರೆ ಅವರ ಪತ್ನಿ ಪೂರ್ಣಿಮಾ ಹಾಸನದ ಸಿಇಒ ಆಗಿದ್ದರು ಭಾವ ರವಿ ಕಾಂತೇಗೌಡ ಐಜಿಪಿ ಯಾಗಿದ್ದರು ಯಾವುದೇ ಗರ್ವ ಅಹಂಕಾರವಿಲ್ಲದೆ ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಳ್ಳುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಹಿಡಿದ ಗೌರವವಾಗಿದೆ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುದರ್ಶನ್ ಎಲ್ಲಾ ಇಲಾಖೆಗಳಿಗಿಂತ ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವುದು ಬಹಳ ಕಷ್ಟದ ಕೆಲಸವಾಗಿದ್ದು ಪ್ರತಿ ಒಂದನೇ ತಾರೀಕಿನಂದು ಪುರಸಭೆಯ ಮುಖ್ಯಾಧಿಕಾರಿ ೪೦ ಲಕ್ಷಕ್ಕೂ ಹೆಚ್ಚು ಹಣವನ್ನು ವಿದ್ಯುತ್ ಬಿಲ್ಲು ಪೌರಕಾರ್ಮಿಕರ ವೇತನ ಸೇರಿದಂತೆ ಇನ್ನಿತರ ವೆಚ್ಚಕ್ಕೆ ಬಳಸಬೇಕಾಗುತ್ತದೆ ಆದ್ದರಿಂದ ಅವರ ಕೆಲಸ ಕಬ್ಬಿಣದ ಕಡಲೆ ಇದ್ದಂತೆ ಎಂದು ತಿಳಿಸಿದರು.
ನಾನು ನನ್ನ ವೃತ್ತಿಜೀವನದಲ್ಲಿ ಪುರಸಭೆ ನಗರಸಭೆ ಪಂಚಾಯಿತಿಗಳ ಬಗ್ಗೆ ಆಡಳಿತ ನಡೆಸುವ ಮರ್ಗಸೂಚಿಯೊಂದನ್ನು ತಯಾರಿಸಿದ್ದು ಅದನ್ನು ಇಲ್ಲಿರುವ ಶಾಸಕರು ಸೇರಿದಂತೆ ವಿಧಾನಸಭೆ ಮತ್ತು ವಿಧಾನಪರಿಷತ್ತಿನಲ್ಲಿ ಚರ್ಚಿಸುವ ಶಾಸಕರಿಗೆ ನೀಡಲಿದ್ದೇನೆ ಆಗ ಶಾಸನಸಭೆಯಲ್ಲಿ ಚರ್ಚಿಸಿ ಸಮಸ್ತ ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತಾತ್ಮಕ ಹೇಗೆ ನಡೆಸಬೇಕೆಂಬುದನ್ನು ಜಾರಿಗೆ ತರಲಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಮಾಜಿ ಅಧ್ಯಕ್ಷ ತಮ್ಮ ನಾಯಕ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ್, ಹಿರಿಯ ಹಾಗೂ ನಿವೃತ್ತ ಪತ್ರಕರ್ತ ಎಚ್.ಪಿ.ಶಿವಣ್ಣ, ಜೆಡಿಎಸ್ ವಕ್ತಾರ ಕೆಎಲ್ ರಮೇಶ್ ನವನಗರ ಅರ್ಬನ್ ಬ್ಯಾಂಕಿನ ವ್ಯವಸ್ಥಾಪಕ ಸುರೇಶ್, ಪುರಸಭಾ ಸದಸ್ಯ ಕೆ ಎಲ್ ಜಗದೀಶ್, ನಿವೃತ್ತ ಶಿಕ್ಷಕ ದೇವೇಂದ್ರ ಸಾಲಿಗ್ರಾಮ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಧುಕುಮಾರ್ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಉಪನ್ಯಾಶಕ ರಾಘವೇಂದ್ರ ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಮಂಜುನಾಥ್ ಡಾ.ಶಂಕರ್ ತಾಲೂಕು ಜೆಡಿಎಸ್ ಅಧ್ಯಕ್ಷ ರಾಜಲಕ್ಷ್ಮಿ ಡಿಂಡಿಮ ಶಂಕರ್ ಪಾಲಾಕ್ಷ ಗುರುಮೂರ್ತಿ ಕೆ.ಎಲ್.ಹೇಮಂತ್, ಮಹೇಶ್ ಸೇರಿದಂತೆ ಇನ್ನಿತರರು ಇದ್ದರು.