ಮಂಡ್ಯ : ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಮಳೆಗಾಗಿ ಕೆಆರ್‌ಎಸ್ ಜಲಾಶಯದ ಕಾವೇರಿ ಪ್ರತಿಮೆ ಬಳಿ ಶಾಸಕ ರಮೇಶ್ ಬಂಡಿಸಿದ್ದೇಗೌಡ ವರುಣ ಕೃಪೆಗಾಗಿ ಪರ್ಜನ್ಯ ಹೋಮ ನಡೆಸಿದರು. ಇಲ್ಲಿನ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಮಳೆರಾಯನಿಗಾಗಿ ಪ್ರಾರ್ಥನೆ ಸಲ್ಲಿಸಿ ಪೂಜಾ ಕೈಂ-ಕರ್ಯಗಳ ಜೊತೆಗೆ ಮಹಾಗಣಪತಿ ಪೂಜೆ, ಸಂಕಲ್ಪ ಯಾಗದ ಬಳಿಕ ವಿಶೇಷ ಜಪ ಮಾಡುವ ಮೂಲಕ ವೇಧ ಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಜಲಾಶಯದ ಕಾವೇರಿ ಪ್ರತಿಮೆ ಬಳಿ ವೇಧ ಬ್ರಹ್ಮ ಡಾ.ಭನುಪ್ರಕಾಶ್ ಶರ್ಮ ನೇತೃತ್ವದಲ್ಲಿ ವೈದಿಕ ತಂಡ ವಿಶೇಷವಾಗಿ ನವಗ್ರಹ ದೇವತೆಗಳ ಕಳಸಗಳನ್ನು ಸ್ಥಾಪಿಸಿ ಹೂವಿನಿಂದ ಅಲಂಕರಿಸಿ, ನವಗ್ರಹ ದೇವತೆಗಳ ಮುಂಭಾಗದಲ್ಲಿ ಹೋಮಕುಂಡ ನಿರ್ಮಿಸಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಕೃಪೆ ತೋರದ ವರಣ ದೇವರ ಮೊರೆ ಹೋದರು.
ಮಳೆ ಬಿದ್ದು ಕೆಆರ್‌ಎಸ್ ಜಲಾಶಯ ಬೇಗ ಭರ್ತಿಯಾಗಲೆಂದು ನಮಿಸಿ ಪರ್ಜನ್ಯ ಹೋಮ ಸೇರಿದಂತೆ ವಿವಿಧ ವಿಶೇಷ ಪೂಜೆ ಸಲ್ಲಿಸಿ ಮಳೆಗಾಗಿ ಪ್ರಾರ್ಥಿಸಿದರು. ವೇದಬ್ರಹ್ಮ ಡಾಭಾನುಪ್ರಕಾಶ ಶರ್ಮ ನೇತತ್ವದಲ್ಲಿ 12 ಮಂದಿ ವೈದಿಕ ತಂಡದಿಂದ ಸಕಲ ಪೂಜಾ ಸಿದ್ದತೆ ಮಾಡಿಕೊಂಡು ವಿಶೇಷ ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗದೆ ಸದ್ಯ ಕೆಆರ್‌ಎಸ್ ಜಲಾಶಯದಲ್ಲಿ ನೀರಿನ ಮಟ್ಟ ದಿನೇ ದಿನೆ ಕುಸಿಯುತ್ತಿದ್ದು, ಈ ಕುಸಿತದಿಂದ ನಾಲೆಗಳಿಗೆ ನೀರು ಹರಿಸದೆ ಕಬ್ಬಿ ಇತರ ಒಣ ಬೆಳೆಗಳು ನೀರಿಲ್ಲದೆ ಬಾಡುತ್ತಿದ್ದು, ಜೊತೆಗೆ ಕೆಆರ್‌ಎಸ್ ಜಲಾಶಯದಲ್ಲಿ 124.80 ಅಡಿ ಗರಿಷ್ಠ ಮಟ್ಟದ ನೀರಿನಲ್ಲಿ 81 ಅಡಿಗೆ ಕುಸಿತ ಕಂಡಿದೆ. ಇದರಿಂದ ಮುಂದಿನ ಮುಂಗಾರು ಬೆಳೆಗೆ ನೀರನ್ನು ನಾಲೆಗಳಿಗೆ ಹರಿಸುವುದಿಲ್ಲವೇನೋ ಎಂಬ ಅತಂಕ ರೈತರಲ್ಲಿ ಮನೆ ಮಾಡಿದೆ. ಹೀಗಾಗಿ ಶಾಸಕರ ಮುಂದಾಳತ್ವದಲ್ಲಿ ಮಳೆಗಾಗಿ ಪರ್ಜನ್ಯ ಹೋಮದ ಮೊರೆಹೋಗಿದ್ದಾರೆ ಎನ್ನಲಾಗಿದ್ದು, ಜಲಾಶಯದ ಬಳಿ ಕಾವೇರಿ ನೀರು ತುಂಬಿದ ದೊಡ್ಡ ಪಾತ್ರೆಯೊಳಗೆ ಕುಳಿತು ಮೂವರು ಹಿರಿಯ ವೈದಿಕರಿಂದ ಮೂಲಮಂತ್ರ ಜಪ ಮಂತ್ರ ಪಠಣೆ ಮಾಡಿದರು. ಈಗಿರುವ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲಾ.
ಇದೀಗ ಜಲಾಶಯದಲ್ಲಿ 81 ಅಡಿಗಳಿದ್ದು, 60 ಅಡಿವರೆಗೂ ನಾಲೆಗಳಿಗೆ ನೀರು ಹರಿಸಬಹುದಾಗಿದೆ. ಉಳಿದ ನೀರನ್ನು ಕುಡಿಯುಲು ಬಳಸಿಕೊಂಡು ಬೆಳೆಗಳಿಗೆ ನಾಲೆಗಳ ಮೂಲಕ ನೀರು ಹರಿಸಲಾಗುತ್ತದೆ. ಇದರಲ್ಲಿ ರೈತರಿಗೆ ಗೊಂದಲ ಬೇಡ ರೈತರು ಮುಂಗಾರು ಬೆಳೆ ಬೆಲೆಯಬಹುದು ಸರ್ಕಾರ ನಾಲೆಗಳಿಗೆ ನೀರು ಹರಿಸಲು ಸೂಚನೆ ನೀಡಿದೆ ಅಧಿಕಾರಿಗಳು ಸಹ ಸಹಮತ ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು.

ಈ ಬಾರಿ ಹೆಚ್ಚಿನ ಮಳೆ ಬರಲು ತಡವಾದ ಹಿನ್ನೆಲೆಯಲ್ಲಿ ಪ್ರತಿ ವರ್ಷ ಮಳೆಗಾಗಿ ಪೂಜೆ ಸಲ್ಲಿಸುವಂತೆ ಈ ಬಾರಿಯೂ ಸಹ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಮಳೆ ಬಂದು ಜಲಾಶಯ ಭರ್ತಿಯಾಗಲು ಪೂಜಾ ಸಂಪ್ರದಾಯಗಳನ್ನು ಮಾಡಲಾಗುತ್ತಿದೆ. ವರುಣ ಕೃಪೆಗೆ ವೈದಿಕ ತಂಡದಿಂದ ವಿಶೇಷವಾಗಿ ಪರ್ಜನ್ಯ ಮಂತ್ರ ಹಾಗೂ ಪರ್ಜನ್ಯ ಹೋಮ ನೇರವೇರಿಸಲಾಗಿದೆ. ಕಾವೇರಿ ಮಾತೆ ಜನರ ಸಂಕಷ್ಟಗಳಿಗೆ ಅಡ್ಡಿ ಮಾಡದೆ ಜಲಾಶಯ ಭರ್ತಿಯಾಗಲೆಂದು ಈ ಪೂಜೆಯಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಶಾಸಕ ರಮೇಶ್ ಬಂಡಿಸಿದ್ದೇಗೌಡ ತಿಳಿಸಿದರು.
ಈ ಬಗ್ಗೆ ವೇದ ಬ್ರಹ್ಮ ಡಾ.ಭಾಶನುಪ್ರಕಾಶ್ ಶರ್ಮ ಮಾತನಾಡಿ, ಕೆಆರ್‌ಎಸ್ ಜಲಾಸಯದ ಬಳಿ ಪರ್ಜನ್ಯ ಹೋಮ ಮತ್ತು ಜಪವನ್ನು ಸೇರಿ ಮಳೆ ರಾಯನಿಗೆ ವಿವಿಧ ಪೂಜೆ ಮಾಡಲಾಯಿತು. ಕರ್ನಾಟಕದಲ್ಲಿ ಮಳೆಯಾಗಲು ಈ ಜಪ ಮಾಡಬೇಕಿದ್ದು, ಅದರಂತೆ ಪೂಜೆಗಳ ಅರಂಭಿಸಲಾಗಿದೆ ಮೂಲ ಮಂತ್ರಗಳ ಪಠಿಸಲಾಗಿದ್ದು, ಕಾವೇರಿ ಪ್ರತಿಮೆ ಬಳಿಯಲ್ಲಿ ಕಳಶ ಸ್ಥಾಪನೆ, ಮಹಾ ಗಣಪತಿ ಪೂಜೆ. ಪುಣ್ಯಹಾದಿ, ಆದಿತ್ಯ ಪೂಜೆ, ಮಳೆಯ ದೇವತೆಗಳ ಆಹ್ವಾಹನೆ ಮಾಡಿ ರುದ್ರಾಭಿಷೇಕ. ಮೂಲಮಂತ್ರಗಳನ್ನು ಜಪಿಸುತ್ತಾ, ವೈದಿಕರಿಂದ ಪರ್ಜನ್ಯ ಜಪ, ಹೋಮ ಪೂಜೆಯಿಂದ ಮಳೆರಾಯ ಭೂಮಿಗೆ ಬಿದ್ದು ಜೀವ ಜಂತುಗಳಿಗೆ ಅನುಕೂಲವಾಗಲು ಈ ವಿಶೇಷ ಪೂಜೆಯನ್ನು ಇತರ ವೈದಿಕ ತಂಡದಿಂದ ನೆರವೇರಿಸಿ ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು. ಮಳೆಗಾಗಿ ನಡೆದ ಈ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.