Sunday, April 20, 2025
Google search engine

Homeರಾಜ್ಯಸುದ್ದಿಜಾಲಮುಂಗಾರು ಹಂಗಾಮು ವಿಫಲ: ತೀವ್ರ ಬರಪೀಡಿತ ತಾಲೂಕಗಳ ಪಟ್ಟಿಗೆ 3 ತಾಲೂಕುಗಳು ಸೇರ್ಪಡೆ

ಮುಂಗಾರು ಹಂಗಾಮು ವಿಫಲ: ತೀವ್ರ ಬರಪೀಡಿತ ತಾಲೂಕಗಳ ಪಟ್ಟಿಗೆ 3 ತಾಲೂಕುಗಳು ಸೇರ್ಪಡೆ


ಧಾರವಾಡ : 2023-24ನೇ ಸಾಲಿನ ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಧಾರವಾಡ ಜಿಲ್ಲೆಯ ಅಳ್ನಾವರ, ಅಣ್ಣಿಗೇರಿ, ಕಲಘಟಗಿ ಈ ಮೂರು ತಾಲೂಕಗಳನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡಿ, ತೀವ್ರ ಬರಪೀಡಿತ ತಾಲೂಕಗಳೆಂದು ರಾಜ್ಯ ಸರಕಾರ ಘೋಷಿಸಿದೆ. ಈ ಕುರಿತು ಕಂದಾಯ ಇಲಾಖೆ ಜಂಟಿ ಕಾರ್ಯದರ್ಶಿಗಳು ಸುತ್ತೋಲೆ (ಅ.12) ಹೊರಡಿಸಿದ್ದು, ಧಾರವಾಡ ಜಿಲ್ಲೆಯ ಧಾರವಾಡ, ನವಲಗುಂದ, ಕುಂದಗೋಳ, ಹುಬ್ಬಳ್ಳಿ ನಗರ, ಹುಬ್ಬಳ್ಳಿ ತಾಲೂಕುಗಳನ್ನು ಈಗಾಗಲೇ ಮೊದಲ ಹಂತದಲ್ಲಿ ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿತ್ತು.

ಈಗ ತೀವ್ರ ಬರದ ಹಿನ್ನಲೆಯಲ್ಲಿ ಕೇಂದ್ರ ಸರಕಾರದ ಬರ ಕೈಪಿಡಿ-2020 ರಲ್ಲಿನ ನಿಯಮ ಮತ್ತು ಮಾನದಂಡಗಳ ಅನುಸಾರ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತವಾರಿ ಕೇಂದ್ರದ ನಿರ್ದೇಶಕರ ಪ್ರಸ್ತಾವನೆ ಪರಿಶೀಲಿಸಿ, ರಾಜ್ಯ ಸರಕಾರವು ಜಿಲ್ಲೆಯ ಅಳ್ನಾವರ, ಅಣ್ಣಿಗೇರಿ ಮತ್ತು ಕಲಘಟಗಿ ತಾಲೂಕುಗಳನ್ನು ಹೆಚ್ಚುವರಿಯಾಗಿ ತೀವ್ರ ಬರಪೀಡಿತ ತಾಲೂಕುಗಳೆಂದು ಘೋಷಿಸಿದೆ.

ಜಿಲ್ಲೆಯಲ್ಲಿ ಮುಂಗಾರು ಹಂಗಾಮು ವಿಫಲ ಮತ್ತು ತೀವ್ರ ಬರದ ಹಿನ್ನಲೆಯಲ್ಲಿ ಎಂಟು ತಾಲೂಕುಗಳು ಬರಪೀಡಿತ ಎಂದು ಘೋಷಿಸಲಾಗಿದ್ದು, ಇಡೀ ಜಿಲ್ಲೆ ಬರಪೀಡಿತ ಜಿಲ್ಲೆಯಾಗಿದೆ. ರಾಜ್ಯ ಸರಕಾರದಿಂದ ಕಾಲಕಾಲಕ್ಕೆ ನೀಡಲಾಗುವ ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ನಿಯಮಗಳು ಮತ್ತು ಮಾರ್ಗಸೂಚಿಗಳನ್ವಯ ಬರ ನಿರ್ವಹಣೆ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular