ದೆಹಲಿ : ದೇಶದಾದ್ಯಂತ ಹವಾಮಾನದಲ್ಲಿ ಭಾರೀ ಬದಲಾವಣೆ ಆಗಿದ್ದು, ಡಿಸೆಂಬರ್ ಚಳಿಗೆ ಜನರು ತತ್ತರಿಸಿ ಹೋಗಿದ್ದಾರೆ. ಮುಂಜಾನೆ ಹಿಮಪಾತವಾಗುತ್ತಿರುವ ಹಿನ್ನೆಲೆ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದ್ದು, ದೆಹಲಿಗೆ ತೆರಳಿದ್ದ ರಾಜ್ಯದ 20ಕ್ಕೂ ಹೆಚ್ಚು ಶಾಸಕ, ಸಚಿವರು ಇಂಡಿಗೋ ವಿಮಾನದಲ್ಲೇ ಸಿಲುಕಿದ ಘಟನೆ ನಡೆದಿದೆ.
ಇನ್ನೂ ಹವಾಮಾನ ವೈಪರೀತ್ಯ ಹಿನ್ನಲೆ ಇಂಡಿಗೋ ವಿಮಾನದಲ್ಲಿ ರಾಜ್ಯದ 20 ಕ್ಕೂ ಹೆಚ್ಚು ಶಾಸಕರು, ಮೂವರು ಸಚಿವರು ಸಿಲುಕಿಕೊಂಡಿದ್ದರು. ಶಾಸಕರೆಲ್ಲಾ ದೆಹಲಿಯಿಂದ ಮರಳಿ ಬೆಳಗಾವಿಗೆ ಆಗಮಿಸಲು ಇಂಡಿಗೋ ವಿಮಾನ ಏರಿದ್ದರು ಎನ್ನಲಾಗಿದೆ.
ಬೆಳ್ಳಗ್ಗೆ 6:45ಕ್ಕೆ ಟೇಕ್ ಆಫ್ ಆಗಬೇಕಿದ್ದ ಇಂಡಿಗೋ ವಿಮಾನ, ಹವಾಮಾನ ವೈಪರಿತ್ಯದ ಕಾರಣ ಸಮಯಕ್ಕೆ ಸರಿಯಾಗಿ ಟೇಕ್ ಆಫ್ ಆಗಲಿಲ್ಲ. ದೆಹಲಿಯ ವಿಮಾನ ನಿಲ್ದಾಣದಲ್ಲಿ ಫ್ಲೈಟ್ ಏರಿ ಟೇಕ್ ಆಫ್ಗಾಗಿ ಶಾಸಕರು ಸಚಿವರು ಕಾಯುತ್ತಿದ್ದರು. ಪೈಟ್ ನಲ್ಲಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಶರಣ ಪ್ರಕಾಶ್ ಪಾಟೀಲ, ಹೆಚ್.ಕೆ ಪಾಟೀಲ್ ಸೇರಿದಂತೆ ರಾಜ್ಯದ 20ಕ್ಕೂ ಹೆಚ್ಚು ಶಾಸಕರಿದ್ದರು ಎಂದು ತಿಳಿದು ಬಂದಿದೆ.



