ಸುತ್ತೂರು: ಕಬಿನಿ ನದಿ ಜಲಾನಯನ ಪ್ರದೇಶದಲ್ಲಿ ಹಾಗೂ ಕೇರಳ ವೈನಾಡಿನಲ್ಲಿ ಕಳೆದ ವಾರದಿಂದ ಹೆಚ್ಚು ಮಳೆಯಾಗಿರುವ ಪರಿಣಾಮ ಕಪಿಲಾ ನದಿಗೆ ಹೆಚ್ಚು ನೀರು ಹರಿದುಬಂದಿದ್ದು, ರೈತರು ಸಂತೋಷಗೊಂಡಿದ್ದಾರೆ.
ನದಿಗೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಕಬಿನಿ ನದಿ ವ್ಯಾಪ್ತಿಯ ಗ್ರಾಮದ ಸಾರ್ವಜನಿಕರು, ಜನಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ತಾಲೂಕು ಆಡಳಿತ ಸೂಚನೆ ನೀಡಿದೆ.
