Monday, April 21, 2025
Google search engine

Homeಸ್ಥಳೀಯತಾಯಿ, ತಂಗಿಯನ್ನ ಕೆರೆಗೆ ತಳ್ಳಿ ಕೊಲೆ: ಪುತ್ರ ಪೊಲೀಸರ ವಶಕ್ಕೆ

ತಾಯಿ, ತಂಗಿಯನ್ನ ಕೆರೆಗೆ ತಳ್ಳಿ ಕೊಲೆ: ಪುತ್ರ ಪೊಲೀಸರ ವಶಕ್ಕೆ

ಹುಣಸೂರು: ಕ್ಷುಲ್ಲಕ ಕಾರಣಕ್ಕೆ ಹೆತ್ತ ತಾಯಿ ಹಾಗೂ  ತಂಗಿಯನ್ನ ಕೆರೆಗೆ ತಳ್ಳಿ ಕೊಲೆ ಮಾಡಿದ ದುರಂತ ಘಟನೆ ಹುಣಸೂರು ತಾಲೂಕಿನ ಮರೂರು ಗ್ರಾಮದಲ್ಲಿ ನಡೆದಿದೆ.

ಹಿರಿಕ್ಯಾತನಹಳ್ಳಿಯ ಅನಿತಾ(40) ಹಾಗೂ ಮಗಳು ಧನುಶ್ರೀ(19) ಮೃತ ದುರ್ದೈವಿಗಳು. ಅನ್ಯ ಕೋಮಿನ ಹುಡುಗನನ್ನ ತಂಗಿ ಪ್ರೀತಿಸಿದ್ದ ಹಿನ್ನಲೆ ಕೃತ್ಯ ನಡೆದಿದ್ದು, ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಂಗಿಯನ್ನ ಕೆರೆಗೆ ತಳ್ಳಿದ ವೇಳೆ ರಕ್ಷಿಸಲು ಬಂದ ತಾಯಿಯನ್ನೂ ಸಹ ಕೆರೆಗೆ ತಳ್ಳಿ ಕೊಲೆ ಮಾಡಿದ್ದಾನೆ. ತಾಯಿ ಹಾಗೂ ತಂಗಿಯನ್ನ ಕೊಂದ ಪಾಪಿ ಮಗ ನಿತಿನ್ ಇದೀಗ ಪೊಲೀಸರ ಅತಿಥಿ.

ಹನಗೋಡು ಗ್ರಾಮದ ಅನ್ಯಕೋಮಿನ ಯುವಕನನ್ನ ಧನುಶ್ರೀ ಪ್ರೀತಿಸುತ್ತಿದ್ದಳು.  ಈ ವಿಚಾರದಲ್ಲಿ ಅಣ್ಣ ತಂಗಿಯರ ನಡುವೆ ವೈ ಮನಸ್ಸು ಬೆಳೆದಿತ್ತು.ಆಗಾಗ ಇಬ್ಬರ ನಡುವೆ ಗಲಾಟೆ ಆಗಿತ್ತು.ಹೆತ್ತವರು ಇಬ್ಬರನ್ನೂ ಸಮಾಧಾನ ಮಾಡುತ್ತಿದ್ದರು. ನಿನ್ನೆ ಸಂಜೆ ಹೆಮ್ಮಿಗೆ ಗ್ರಾಮದಲ್ಲಿರುವ ಮಾವನ ಮನೆಗೆ ಹೋಗುವ ಕಾರಣ ನೀಡಿ ತಾಯಿ ಹಾಗೂ ತಂಗಿಯನ್ನ ನಿತಿನ್ ಬೈಕ್ ನಲ್ಲಿ ಕರೆದೊಯ್ದಿದ್ದಾನೆ.

ಮರೂರು ಕೆರೆ ಬಳಿ ಬೈಕ್ ನಿಲ್ಲಿಸಿ ಮೊದಲು ತಂಗಿಯನ್ನ ಕೆರೆಗೆ ತಳ್ಳಿದ್ದಾನೆ.ನಂತರ ಮಗಳನ್ನ ರಕ್ಷಿಸಲು ಬಂದ ತಾಯಿಯನ್ನೂ ಸಹ ಕೆರೆಗೆ ತಳ್ಳಿದ್ದಾನೆ. ನಂತರ ಪಶ್ಚಾತ್ತಾಪ ಪಟ್ಟು ತಾಯಿಯನ್ನ ರಕ್ಷಿಸಿಕೊಳ್ಳಲು ನಿತಿನ್ ಕೆರೆಗೆ ಹಾರಿದ್ದಾನೆ. ಆದ್ರೆ ಇಬ್ಬರೂ ಸಾವನ್ನಪ್ಪಿದ್ದಾರೆ. ಒದ್ದೆ ಬಟ್ಟೆಯಲ್ಲೇ ಮನೆಗೆ ಹಿಂದಿರುಗಿ ತಂದೆ ಸತೀಶ್ ಬಳಿ ನಡೆದ ಘಟನೆಯನ್ನ ನಿತಿನ್ ತಿಳಿಸಿದ್ದಾನೆ.

ಆರೋಪಿ ನಿತಿನ್ ನ ಹುಣಸೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನ ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

RELATED ARTICLES
- Advertisment -
Google search engine

Most Popular