ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಭೇಟಿಗೆ ಇಂದು ಸೋಮವಾರ ಕುಟುಂಬ ಬಂದಿದ್ದು, ಈ ವೇಳೆ ದರ್ಶನ್ ತಾಯಿ ಮೀನಾ ಭಾವುಕರಾಗಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ನೋಡಲು ಕುಟುಂಬಸ್ಥರು ಖಾಸಗಿ ವಾಹನದಲ್ಲಿ ಆಗಮಿಸಿದ್ದು, ದರ್ಶನ್ ತಾಯಿ ಮೀನಾ, ಸೋದರ ದಿನಕರ್, ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಮಗ ವಿನೀಶ್ ಜೈಲಿಗೆ ಭೇಟಿ ನೀಡಿದ್ದಾರೆ.
ಜೈಲಿನಲ್ಲಿ ನಟ ದರ್ಶನ್ ನೋಡಿ ತಾಯಿ ಮೀನಾ ಭಾವುಕರಾಗಿದ್ದಾರೆ. ದರ್ಶನ್ ರನ್ನು ಅಪ್ಪಿ ಮೀನಾ ಕಣ್ಣೀರಿಟ್ಟಿದ್ದಾರೆ. ಈ ವೇಳೆ ಸಹೋದರ ದಿನಕರ್ ದರ್ಶನ್ ಗೆ ಧೈರ್ಯ ತುಂಬಿದ್ದಾರೆ. ಸಹೋದರ ಜೊತೆಗೆ ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.