ಗುಂಡ್ಲುಪೇಟೆ(ಚಾಮರಾಜನಗರ): ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಸಫಾರಿ ಹಾದಿಯಲ್ಲಿ ಹುಲಿಯೊಂದು ತನ್ನ ಎರಡು ಮರಿಗಳೊಂದಿಗೆ ಕೆರೆಯಲ್ಲಿ ನೀರು ಕುಡಿದು, ರಿಲ್ಯಾಕ್ಸ್ ಮೂಡ್ ನಲ್ಲಿ ಕಾಲಕಳೆದಿದೆ. ಇದು ಪ್ರವಾಸಿಗರಿಗೆ ರೋಮಾಂಚನ ಉಂಟು ಮಾಡಿದೆ.
ಬಂಡೀಪುರದ ಸಫಾರಿ ರಸ್ತೆ ಮಾರ್ಗದ ಬೋಳು ಗುಡ್ಡದಲ್ಲಿರುವ ಆಲಗಟ್ಟೆ ಕೆರೆಯಲ್ಲಿ ಹುಲಿ ತನ್ನ ಎರಡು ಮರಿಗಳೊಂದಿಗೆ ನೀರು ಕುಡಿಯುತ್ತ ಕೆಲಹೊತ್ತು ಚಿನ್ನಾಟವಾಡಿದೆ. ಒಂದು ಮರಿ ಹುಲಿ ತಾಯಿ ಜೊತೆ ಇದ್ದರೆ ಮತ್ತೊಂದು ಪೊದೆಯಿಂದ ಬಂದು ಒಟ್ಟಿಗೆ ಸೇರಿಕೊಂಡ ದೃಶ್ಯ ಸಫಾರಿಗೆ ತೆರಳಿದ್ದ ಪ್ರವಾಸಿಗರ ಕ್ಯಾಮಾರದಲ್ಲಿ ಬುಧವಾರ ಸಂಜೆ ಸೆರೆಯಾಗಿದೆ. ಈ ದೃಶ್ಯವನ್ನು ಕಂಡು ಸಫಾರಿ ಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.



