ಬೆಂಗಳೂರು: ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ತಾಯಿಯೊಬ್ಬಳು ತನ್ನ ಮೂವರು ವರ್ಷದ ಮಗುವಿಗೆ ಚಿತ್ರಹಿಂಸೆ ನೀಡಿರುವ ಘಟನೆ ಬೆಂಗಳೂರಿನ ವೀರಭದ್ರ ನಗರದಲ್ಲಿ ನಡೆದಿದೆ.
ಮಗುವಿನ ದೇಹ ಮೇಲೆಲ್ಲ ಗಾಯದ ಗುರುತುಗಳು ಪತ್ತೆಯಾಗಿದೆ. ಮನೆಯಲ್ಲಿ ಒಂಟಿಯಾಗಿದ್ದ ಮಗು ಕಿಟಕಿಯ ಬಳಿ ಬಂದು ಪಕ್ಕದ ಮನೆಯವರನ್ನು ನನಗೆ ಅನ್ನ ಕೊಡಿ ಎಂದು ಕೇಳಿದೆ. ಆಗ ಏನಾಯಿತು ಎಂದು ವಿಚಾರಿಸಿದಾಗ ಮಗು ತನ್ನ ತಾಯಿ ಮತ್ತು ಅಂಕಲ್ ನನಗೆ ಹೊಡೆಯುತ್ತಾರೆ ಎಂದು ವಿವರಿಸಿದೆ.
ಈ ಬಗ್ಗೆ ಸುದ್ದಿಯಾಗುತ್ತಲೆ ಸಂಘಟನೆಯೊಂದು ಮಗುವಿನ ರಕ್ಷಣೆಗೆ ಮುಂದಾಗಿದ್ದು, ಗೃಹ ಬಂಧನದಲ್ಲಿದ್ದ ಮಗುವನ್ನು ರಕ್ಷಿಸಿದ್ದಾರೆ. ಸದ್ಯ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯರು, ತಾಯಿ ಮಗುವನ್ನು ಮನೆಯಲ್ಲಿ ಕೂಡಿಹಾಕಿ ಕೆಲಸಕ್ಕೆ ಹೋಗುತ್ತಾಳೆ. ಬೆಳಿಗ್ಗೆ ಕೆಲಸಕ್ಕೆ ಹೋದರೆ ರಾತ್ರಿ ಆಕೆ ಮನೆಗೆ ಬರುತ್ತಾಳೆ. ಅಲ್ಲಿಯವರೆಗೂ ಮಗು ಒಂದೇ ಮನೆಯಲ್ಲಿ ಇರುತ್ತೇ ಎಂದು ಹೇಳಿದ್ದಾರೆ.