Tuesday, April 22, 2025
Google search engine

Homeರಾಜ್ಯಮೌಂಟ್ ಅಬು ವಿಶ್ವದ ಶಾಂತಿಯ ಕೇಂದ್ರ: ಸುರೇಶ್ ಎನ್ ಋಗ್ವೇದಿ

ಮೌಂಟ್ ಅಬು ವಿಶ್ವದ ಶಾಂತಿಯ ಕೇಂದ್ರ: ಸುರೇಶ್ ಎನ್ ಋಗ್ವೇದಿ

ಚಾಮರಾಜನಗರ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಪವಿತ್ರ ಸ್ಥಳವಾದ ಮೌಂಟ್ ಅಬು ವಿಶ್ವದ ಶಾಂತಿಯ ಕೇಂದ್ರ  ಹಾಗೂ ಭೂಲೋಕದ ಸ್ವರ್ಗವೆಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.

ಅವರು ನಗರದ ಪ್ರಜಾಪಿತ ಬ್ರಹ್ಮಕುಮಾರಿ  ಈಶ್ವರಿ ವಿಶ್ವವಿದ್ಯಾಲಯದ ಪ್ರಕಾಶ ಭವನದಲ್ಲಿ ಅಖಿಲ ಭಾರತ ಪ್ರಭಾವ ಮಿಲನ್ ಕಾರ್ಯಕ್ರಮಕ್ಕೆ ಮೌಂಟ್ ಅಬುಗೆ ತೆರಳುತ್ತಿರುವ ಸುಮಾರು 16 ಜನರಿಗೆ ಶುಭ ಹಾರೈಸಿ ಅವರು ಮಾತನಾಡಿದರು.

ಭಾರತ ವಿಶ್ವದ ಅತ್ಯಂತ ಶ್ರೇಷ್ಠ ಧಾರ್ಮಿಕ ಕೇಂದ್ರಗಳ ಸ್ಥಳಗಳನ್ನು ಹೊಂದಿರುವ ನಾಡಾಗಿದೆ. ಹಿಮಾಲಯ ಪರ್ವತ ಸಾವಿರಾರು ಸಂತರಿಗೆ, ದಾರ್ಶನಿಕರು, ಚಿಂತಕರು ತತ್ವಜ್ಞಾನಿಗಳು, ಋಷಿಗಳಿಗೆ ಮತ್ತು ಆಧ್ಯಾತ್ಮ ಸಾಧಕರಿಗೆ ಶ್ರೇಷ್ಠವಾದ ಸ್ಥಳವಾಗಿದೆ. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಕೇಂದ್ರ ಸ್ಥಳವಾದ ಮೌಂಟ್ ಅಬು ಧಾರ್ಮಿಕ ಸಾಧನೆಗೆ, ಮಾನವ ಕಲ್ಯಾಣಕ್ಕೆ ಹಾಗೂ ಸಮಗ್ರ ವಿಶ್ವ ಶಾಂತಿಯ ಮನಸ್ಸುಗಳನ್ನು ಸ್ಪೂರ್ತಿ ಯುತವಾಗಿ ತುಂಬುವ ಶಕ್ತಿ ಸ್ಥಳವಾಗಿದೆ. ಪವಿತ್ರ ಸ್ಥಳಗಳನ್ನು ಸಂದರ್ಶಿಸಿ ಅಲ್ಲಿಯ ಪವಿತ್ರತೆಯನ್ನು ಮೈಕೋಡಿಸಿಕೊಳ್ಳುವುದು ಬಹಳ ಮುಖ್ಯವಾದದ್ದು. ಪವಿತ್ರ ಸ್ಥಳಗಳು ಮಾನವ ಜನ್ಮ ಸಾರ್ಥಕವಾಗಲು ಸಹಾಯ ಮಾಡುವುದೆಂದು ತಿಳಿಸಿ ಸರ್ವರಿಗೂ ಕನ್ನಡದ ಶಲ್ಯಗಳನ್ನು ನೀಡಿ ಗೌರವಿಸಿದರು.

ಪ್ರಾಸ್ತಾವಿಕವಾಗಿ  ಮಾತನಾಡಿದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬಿಕೆ ಆರಾಧ್ಯ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಇಡೀ ವಿಶ್ವದಲ್ಲಿ ಅಪಾರ ಸಂಖ್ಯೆಯ ಕೇಂದ್ರಗಳನ್ನು ಹಾಗೂ ಲಕ್ಷಾಂತರ ಭಕ್ತರನ್ನು ಹೊಂದಿರುವ ಕೇಂದ್ರ. ಆತ್ಮವನ್ನು ಅರಿಯುವುದು, ಮನುಷ್ಯ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳುವುದು ವಿಶ್ವಶಾಂತಿಯ ನೆಮ್ಮದಿಯ ವಾತಾವರಣವನ್ನು ಸಮಾಜದಲ್ಲಿ ಸೃಷ್ಟಿಸುವ ಮೂಲಕ ಪ್ರತಿಯೊಬ್ಬ ವ್ಯಕ್ತಿಯು ಶ್ರೇಷ್ಠತ್ವವನ್ನು ಪಡೆಯಲು ಮೌಂಟ್ ಅಬು ಪರ್ವತ ಪ್ರದೇಶದ ದಿವ್ಯಮಂದಿರಕ್ಕೆ ತೆರಳುವುದು, ಅಲ್ಲಿ ಮನಸ್ಸುಗಳ ಅರಿಯಲು ಪ್ರೇರಣೆ ಸಿಗಲಿದೆ ಎಂದರು.

ದಿವ್ಯಸಾನಿಧ್ಯವನ್ನು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಬಿಕೆ ದಾನೇಶ್ವರಿ ಅವರು ಮಾತನಾಡಿ,  ಸಕಾರಾತ್ಮಕತೆ ಹಾಗೂ ಪವಿತ್ರತೆಯ ಸಂಕೇತ ಧಾರ್ಮಿಕ ಕೇಂದ್ರಗಳು. ಧಾರ್ಮಿಕ ಕೇಂದ್ರಗಳಲ್ಲಿ ಮನುಷ್ಯನಿಗೆ ಸಿಗುವ ಆನಂದ ಅಪಾರ. ತಪಸ್ವಿಗಳ ಸ್ಥಳಗಳನ್ನು ಸಂದರ್ಶಿಸಿ ಭೇಟಿ ನೀಡುವುದರಿಂದ ಧರ್ಮದ ಅರಿವು, ಮನಸ್ಸಿನ ಜಾಗೃತಿ ಹೆಚ್ಚಾಗುವುದು ಎಂದು ಪ್ರತಿಯೊಬ್ಬರು ವಿಶ್ವಶಾಂತಿ ಕೇಂದ್ರವಾದ ಮೌಂಟ್ ಅಬುವನ್ನು ಒಮ್ಮೆ ಭೇಟಿ ನೀಡಿ ಮಾನವ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಿ ಎಂದು ತಿಳಿಸಿದರು.

ಗೋವಿಂದರಾಜು, ಶ್ರೀನಿವಾಸ್, ಮಹೇಶ್, ಬಿಕೆ ಆರಾಧ್ಯ ,ನಾಗಣ್ಣ ಪ್ರಮೀಳಾ ,ಶಶಿ, ಆಶಾ, ನಿರ್ಮಲ, ಭಾಗ್ಯ, ಮಂಗಳ, ಗೌರಿ, ಲಲಿತ, ವಿಜಯಲಕ್ಷ್ಮಿ, ಮರಗತಮ್ಮ, ಮೇದಿನಿ ಮುಂತಾದವರಿಗೆ ಶುಭ ಕೋರಿ ಗೌರವಿಸಲಾಯಿತು.

RELATED ARTICLES
- Advertisment -
Google search engine

Most Popular