Monday, December 2, 2024
Google search engine

Homeಅಡುಗೆಬಾಯಿ ಚಪ್ಪರಿಕೊಂಡು ತಿನ್ನಬಹುದಾದ ಒತ್ತು ಶಾವಿಗೆ, ಕಾಯಿ ಹಾಲು; ಮನೆಯಲ್ಲಿಯೇ ಸುಲಭವಾಗಿ ಮಾಡಿ

ಬಾಯಿ ಚಪ್ಪರಿಕೊಂಡು ತಿನ್ನಬಹುದಾದ ಒತ್ತು ಶಾವಿಗೆ, ಕಾಯಿ ಹಾಲು; ಮನೆಯಲ್ಲಿಯೇ ಸುಲಭವಾಗಿ ಮಾಡಿ

ಮನೆಯಲ್ಲಿಯೇ ಖರ್ಚಿಲ್ಲದೇ ಒತ್ತು ಶಾವಿಗೆ, ಕಾಯಿ ಹಾಲು ಮಾಡಬಹುದು. ವಿಶೇಷವೆಂದರೆ ಈ ಸಿಹಿತಿಂಡಿಯಲ್ಲಿ ಸಕ್ಕರೆಯನ್ನು ಬಳಸಲಾಗುವುದಿಲ್ಲ. ಬದಲಾಗಿ ಬೆಲ್ಲವನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಒತ್ತು ಶಾವಿಗೆಯನ್ನು ಹಬ್ಬಹರಿದಿನಗಳಲ್ಲಿ ಮಾಡುವುದು ಸಹಜ. ಆದರೆ ಕೆಲ ಮಂದಿ ತಮಗೆ ತಿನ್ನಬೇಕು ಅನಿಸಿದಾಗ ಕೂಡ ಮನೆಯಲ್ಲಿ ಒತ್ತು ಶಾವಿಗೆ ಕಾಯಿ ಹಾಲು ಮಾಡಿ ಸವಿಯುತ್ತಾರೆ. ಈ ರೆಸಿಪಿ ಇಲ್ಲಿದೆ ನೋಡಿ.

ಬೇಕಾಗುವ ಪದಾರ್ಥಗಳು

ಅಕ್ಕಿ- 3 ಬಟ್ಟಲು
ಅವಲಕ್ಕಿ- 1 ಬಟ್ಟಲು
ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ

ನೀರಿನಲ್ಲಿ ಅಕ್ಕಿಯನ್ನು ಚೆನ್ನಾಗಿ ತೊಳೆದು ಹಿಂದಿನ ದಿವಸ ರಾತ್ರಿ ಅಕ್ಕಿ ನೆನಸಬೇಕು. ಮರು ದಿನ ಬೆಳಿಗ್ಗೆ 1 ಬಟ್ಟಲು ಅವಲಕ್ಕಿ 5 ನಿಮಿಷ ನೆನೆಸಿ ಅದನ್ನು ಅಕ್ಕಿಯ ಜೊತೆ ನುಣ್ಣಗೆ ರುಬ್ಬಬೇಕು. ಆಮೇಲೆ ರುಬ್ಬಿದ ಹಿಟ್ಟನ್ನು ಒಂದು ಪಾತ್ರೆಗೆ ಹಾಕಬೇಕು. ಅರ್ಧ ಚಮಚ ಉಪ್ಪು ಹಾಕಿ ಒಲೆಯ ಮೇಲೆ ಇಟ್ಟು ಹಿಟ್ಟನ್ನು ಕಾಯಿಸಬೇಕು.
ಕೈಗೆ ಹಿಡಿಯದಂತೆ ಚೆನ್ನಾಗಿ ತೊಳೆಸಬೇಕು. ಹಿಟ್ಟು ಮುದ್ದೆಯಾದ ನಂತರ ಇಳಿಸಬೇಕು. ಆ ಮೇಲೆ ಹಿಟ್ಟು ತಣಿದ ನಂತರ ಉಂಡೆ ಕಟ್ಟಬೇಕು. ಬೇಯಿಸಿದ ಒಂದೊಂದು ಉಂಡೆಯನ್ನು ಶಾವಿಗೆ ಒರಳಿಗೆ ಹಾಕಿ ಒತ್ತಬೇಕು. ಎಳೆ ಎಳೆಯಾಗಿ ಶಾವಿಗೆ ಬರುತ್ತದೆ. ಶಾವಿಗೆಗೆ ಕಾಯಿಹಾಲು ಹಾಕಿಕೊಂಡು ತಿನ್ನಬೇಕು.

ಕಾಯಿಹಾಲು ಮಾಡುವ ವಿಧಾನ:

ಬೇಕಾಗುವ ಪದಾರ್ಥಗಳು

ತೆಂಗಿನಕಾಯಿ ತುರಿ-1 ಬಟ್ಟಲು
ಗಸಗಸೆ-ಸ್ವಲ್ಪ
ಏಲಕ್ಕಿ-2
ಲವಂಗ-1
ಬೆಲ್ಲ-1 ಉಂಡೆ ಸಣ್ಣದು
ನೀರು-2 ಬಟ್ಟಲು

ಮಾಡುವ ವಿಧಾನ

ತೆಂಗಿನಕಾಯಿ ತುರಿ ಜೊತೆಯಲ್ಲಿ ಏಲಕ್ಕಿ, ಗಸಗಸೆ, ಲವಂಗ, ನೀರು ಹಾಕಿ ನುಣ್ಣಗೆ ರುಬ್ಬಬೇಕು. ರುಬ್ಬಿದ ಹಾಲನ್ನು ಸೋಸಬೇಕು. ಆಮೇಲೆ ಒಂದು ಪಾತ್ರೆಗೆ ಅರ್ಧ ಕಪ್ ಬೆಲ್ಲ, ಕಾಲು ಕಪ್ ನೀರು ಹಾಕಿ. ಬೆಲ್ಲ ಕರಗುವ ತನಕ ಬಿಸಿಮಾಡಿ ಪಾಕ ಮಾಡಿಕೊಳ್ಳಬೇಕು. ನಂತರ ಇದಕ್ಕೆ ರುಬ್ಬಿದ ಮಿಶ್ರಣ ಮತ್ತು ಒಂದೂವರೆ ಕಪ್ ತೆಳುವಾದ ತೆಂಗಿನಕಾಯಿ ಹಾಲು ಹಾಕಿ ಬೆರಸಬೇಕು. ಬಳಿಕ ಒಂದು ಚಿಟಿಕೆ ಉಪ್ಪು, ಏಲಕ್ಕಿ ಪುಡಿ ಹಾಕಿ ಮಧ್ಯಮ ಉರಿಯಲ್ಲಿ 3 ರಿಂದ 4 ನಿಮಿಷ ಕುದಿಸಿಬೇಕು. ಇದೀಗ ಕಾಯಿ ಹಾಲು ಕೂಡ ಸಿದ್ಧವಾಗುತ್ತದೆ. ನಂತರ ಒತ್ತಿಟ್ಟ ಶಾವಿಗೆಗೆ ಕಾಯಿ ಹಾಲು ಬೆರೆಸಿಕೊಂಡು ಸವಿಯಬಹುದು.

RELATED ARTICLES
- Advertisment -
Google search engine

Most Popular