Friday, April 18, 2025
Google search engine

Homeಸಿನಿಮಾಸಿನಿಮಾ:'ಆಯುಕ್ತ' ಇಂದಿನಿಂದ ರಾಜ್ಯದ್ಯಂತ ಬಿಡುಗಡೆ

ಸಿನಿಮಾ:’ಆಯುಕ್ತ’ ಇಂದಿನಿಂದ ರಾಜ್ಯದ್ಯಂತ ಬಿಡುಗಡೆ

ಚಿತ್ರದ ಪ್ರಮೋಷನ್ಗಾಗಿ ಮಳವಳ್ಳಿ ರಾಜರಾಜೇಶ್ವರಿ ಚಿತ್ರಮಂದಿರಕ್ಕೆ ಆಯುಕ್ತ ಚಿತ್ರತಂಡ, ನಾಯಕ ನಟ ಸೇರಿ ಹಲವು ಕಲಾವಿದರು ಭೇಟಿ ನೀಡಿದರು.

ಮಂಡ್ಯ : ಮಳವಳ್ಳಿಯ ರಾಜರಾಜೇಶ್ವರಿ ಚಿತ್ರಮಂದಿರಕ್ಕೆ ಚಿತ್ರದ ಪ್ರಮೋಷನ್ ಗಾಗಿ ಆಯುಕ್ತ ಚಿತ್ರ ತಂಡ ನಿರ್ದೇಶಕರೊಂದಿಗೆ, ನಾಯಕ ನಟ ಸೇರಿ ಹಲವು ಕಲಾವಿದರು ಭೇಟಿ ನೀಡಿದರು.

ಮಂಡ್ಯದ ಗ್ರಾಮೀಣ ಪ್ರತಿಭೆ ನಿರ್ದೇಶಕ ಕನಸು ರಮೇಶ್ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದ್ದು ಚಿತ್ರಮಂದಿರಕ್ಕೆ ಆಗಮಿಸಿದ ಚಿತ್ರತಂಡಕ್ಕೆ ಅದ್ದೂರಿ ಸ್ವಾಗತ ಕೋರಲಾಯಿತು. ಪಟಾಕಿಸಿ ತಮಟೆ ವಾದ್ಯಗಳೊಂದಿಗೆ ಚಿತ್ರತಂಡಕ್ಕೆ ಭವ್ಯ ಸ್ವಾಗತ ಕೋರಿ ಪ್ರೇಕ್ಷಕರೊಂದಿಗೆ ಕುಳಿತು ಚಿತ್ರತಂಡವು ಜೊತೆಗೆ ಕಲಾವಿದರು ಸಿನಿಮಾ ವೀಕ್ಷಣೆ ಮಾಡಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡರು.

ಸಮಾಜಕ್ಕೆ ಚಿತ್ರದ ಮೂಲಕ ಒಂದು ಒಳ್ಳೆಯ ಸಂದೇಶ ಕೊಟ್ಟ ನಿರ್ದೇಶಕರ ಬಗ್ಗೆ ಪ್ರೇಕ್ಷಕರಿಂದ ಪ್ರಶಂಸೆಯ ಸುರಿಮಳೆ ಸಿಕ್ಕಿತು .ಇಂದಿನಿಂದ ರಾಜ್ಯದ್ಯಂತ ಆಯುಕ್ತ ಕನ್ನಡ ಚಿತ್ರ ಬಿಡುಗಡೆಯಾಗುತ್ತಿದ್ದು ,ಚಿತ್ರದಲ್ಲಿ ಹೊಸ ಕಲಾವಿದರು ಹಾಗೂ ಯುವ ಕಲಾವಿದರ ನಟನೆಯ ಕೈಚಳಕವಿದೆ.

RELATED ARTICLES
- Advertisment -
Google search engine

Most Popular