Friday, April 18, 2025
Google search engine

Homeಸಿನಿಮಾಸಿನಿಮಾ: ಮಾರ್ಚ್ 15ಕ್ಕೆ ‘ಸೋಮು ಸೌಂಡ್ ಇಂಜಿನಿಯರ್’ ರಾಜ್ಯಾದ್ಯಂತ ರಿಲೀಸ್

ಸಿನಿಮಾ: ಮಾರ್ಚ್ 15ಕ್ಕೆ ‘ಸೋಮು ಸೌಂಡ್ ಇಂಜಿನಿಯರ್’ ರಾಜ್ಯಾದ್ಯಂತ ರಿಲೀಸ್

‘ದುನಿಯಾ’ ಸೂರಿ ಅವರು ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಅವರ ಶಿಷ್ಯ ಅಭಿ ಈಗ ಸಿನಿಮಾ ಮಾಡಿದ್ದಾರೆ. ‘ಸೋಮು ಸೌಂಡ್ ಇಂಜಿನಿಯರ್’ ಅನ್ನೋದು ಸಿನಿಮಾದ ಶೀರ್ಷಿಕೆ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ವೇಳೆ ಸೂರಿ ಹಾಗೂ ಧನಂಜಯ್ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಆಲ್​ ದಿ ಬೆಸ್ಟ್ ಹೇಳಿದ್ದಾರೆ. ಈ ಸಿನಿಮಾದ ಟ್ರೇಲರ್ ಗಮನ ಸೆಳೆಯುತ್ತಿದೆ. ಪಕ್ಕಾ ಹಳ್ಳಿ ಶೈಲಿಯಲ್ಲಿ ಸಿನಿಮಾ ಮೂಡಿ ಬಂದಿದೆ. ಮಾರ್ಚ್ 15ಕ್ಕೆ ಸಿನಿಮಾ ರಾಜ್ಯಾದ್ಯಂತ ರಿಲೀಸ್ ಆಗಲಿದೆ.

ಈ ಸಿನಿಮಾ ಹುಟ್ಟಿದ್ದು ಹೇಗೆ ಎನ್ನುವ ಬಗ್ಗೆ ಅಭಿ ಮಾತನಾಡಿದ್ದಾರೆ. ಈ ಸಿನಿಮಾ ಹುಟ್ಟೋಕೆ ಕಾರಣ ಆಗಿದ್ದು ಸೂರಿ ಅವರೇ ಅಂತೆ. ‘ನೀನು ಬೆಳೆದ ಜಾಗ, ಭಾಷೆಯ ಮೇಲೆ ಸಿನಿಮಾ ಮಾಡು ಅಭಿ ಎಂದರು. ಸ್ಕ್ರಿಪ್ಟ್ ಬರೆದು ಸೂರಿಗೆ ಅವರಿಗೆ ನೀಡಿದೆ. ಅವರಿಗೆ ಸ್ಕ್ರಿಪ್ಟ್ ಕೊಡುವಾಗ ಭಯ ಇತ್ತು. ನನ್ನ ತಂಡಕ್ಕೆ ಧನ್ಯವಾದ’ ಎಂದಿದ್ದಾರೆ ಅಭಿ.

‘ಸೋಮು ಸೌಂಡ್ ಇಂಜಿನಿಯರ್’ ನಿರ್ದೇಶಕನಾಗಿ ಅಭಿಗೆ ಮೊದಲ ಅನುಭವ. ಸೂರಿ ಗರಡಿಯಲ್ಲಿ ಅವರು ಪಳಗಿದ್ದಾರೆ. 9 ವರ್ಷ ನಿರ್ದೇಶನದಲ್ಲಿ ಪಳಗಿರೋ ಅವರು ಈಗ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಈ ಸಿನಿಮಾಗೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಟಗರು’ ಖ್ಯಾತಿಯ ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಉತ್ತರ ಕರ್ನಾಟಕ ಶೈಲಿಯಲ್ಲಿ ಸಖತ್ ರಗಡ್ ಆಗಿ ಸಂಭಾಷಣೆ ಮೂಡಿ ಬಂದಿದೆ. ‘ಸೋಮು ಸೌಂಡ್ ಇಂಜಿನಿಯರ್’ ಸಂಪೂರ್ಣವಾಗಿ ಹಳ್ಳಿಯಲ್ಲಿ ನಡೆಯೋ ಕಥೆ ಅನ್ನೋದು ಚಿತ್ರದ ಟ್ರೇಲರ್​ ನೋಡಿದವರಿಗೆ ಗೊತ್ತಾಗುತ್ತದೆ.

‘ಸೋಮು ಸೌಂಡ್ ಇಂಜಿನಿಯರ್’ ಚಿತ್ರಕ್ಕೆ ‘ಸಲಗ’ ಸಿನಿಮಾದಲ್ಲಿ ನಟಿಸಿದ್ದ ಶ್ರೇಷ್ಠ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೊತೆಯಾಗಿ ಶ್ರುತಿ ಪಾಟೀಲ್ ನಟಿಸಿದ್ದಾರೆ. ಅಪೂರ್ವ, ಜಹಾಂಗೀರ್, ಯಶ್ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕ್ರಿಸ್ಟೋಫರ್ ಕಿಣಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಡಾಲಿ ಧನಂಜಯ್ ಅವರು ‘ಸೋಮು ಸೌಂಡ್ ಇಂಜಿನಿಯರ್’ ದೊಡ್ಡದಾಗಿ ಸೌಂಡ್ ಮಾಡಲಿ ಎಂದು ಹಾರೈಸಿದರು.

RELATED ARTICLES
- Advertisment -
Google search engine

Most Popular