ತುಮಕೂರು: ವಿ.ಸೋಮಣ್ಣಗೆ ಲೋಕಸಭೆ ಟಿಕೆಟ್ ಕೊಡಿಸಲು ತುಮಕೂರು ಸಂಸದ ಜಿ.ಎಸ್.ಬಸವರಾಜು ಕಸರತ್ತು ಮುಂದುವರೆಸಿದ್ದಾರೆ.
ದೆಹಲಿ ಲಾಭಿ ಆಯ್ತು ಈಗ ರಾಜ್ಯದ ಮಟ್ಟದ ಲಾಭಿ ಶುರು ಮಾಡಿದ್ದಾರೆ. ಸೋಮಣ್ಣಗೆ ಟಿಕೆಟ್ ಕೊಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನವೊಲಿಕೆಗೆ ಜಿ.ಎಸ್ ಬಸವರಾಜು ಪ್ರಯತ್ನಿಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ಯಡಿಯೂರಪ್ಪ ಜಿ.ಎಸ್ ಬಸವರಾಜು ಮನೆಗೆ ಭೇಟಿ ನೀಡಿದ್ದು, ತುಮಕೂರು ಲೋಕಸಭೆ ಟಿಕೆಟ್ ಬಗ್ಗೆ ಯಡಿಯೂರಪ್ಪ ಜೊತೆಗೆ ಚರ್ಚೆ ನಡೆಸಿದ್ದಾರೆ.
ಯಡಿಯೂರಪ್ಪಗೆ ತುಮಕೂರು ಲೋಕಸಭೆ ಕ್ಷೇತ್ರದ ಗ್ರೌಂಡ್ ರಿಪೋರ್ಟ್ ನೀಡಿರುವ ಅವರು, ಗ್ರೌಂಡ್ ರಿಪೋರ್ಟ್ ಜೊತೆಗೆ ಸೋಮಣ್ಣಗೆ ಟಿಕೆಟ್ ಕೊಟ್ರೆ ಬೆಸ್ಟ್ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪ ನನಗೆ ಸ್ಪರ್ಧೆ ಮಾಡಿ ಅಂತಾ ಹೇಳಿದ್ದಾರೆ. ಹಾಗಾಗಿ ನಾನು ಕೂಡ ಆಕಾಂಕ್ಷಿ ಎಂದು ಮಾಧುಸ್ವಾಮಿ ತಿಳಿಸಿದ್ದರು.
ಮಾಧುಸ್ವಾಮಿ ಹೇಳಿಕೆ ಬೆನ್ನಲ್ಲೆ ಯಡಿಯೂರಪ್ಪನನ್ನು ಜಿ.ಎಸ್ ಬಸವರಾಜು ಭೇಟಿ ಮಾಡಿದ್ದಾರೆ.
ಸೋಮಣ್ಣ ಜೊತೆಗೆ ಅಮಿತ್ ಷಾ, ನಡ್ಡಾ, ನಿತಿನ್ ಗಡ್ಕರಿಯನ್ನ ಸಂಸದ ಜಿ.ಎಸ್. ಬಸವರಾಜು ಭೇಟಿ ಮಾಡಿದ್ದಾರೆ.