Monday, April 21, 2025
Google search engine

Homeರಾಜ್ಯ10 ವರ್ಷದ ಕೆಲಸದ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ ಸಂಸದ ಪ್ರತಾಪ್ ಸಿಂಹ: ಜನಾಶೀರ್ವಾದ ನೀಡುವಂತೆ...

10 ವರ್ಷದ ಕೆಲಸದ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿದ ಸಂಸದ ಪ್ರತಾಪ್ ಸಿಂಹ: ಜನಾಶೀರ್ವಾದ ನೀಡುವಂತೆ ಮನವಿ

ಮೈಸೂರು: ಲೋಕಸಭೆ ಚುನಾವಣೆ ಕೆಲವೇ ತಿಂಗಳು ಬಾಕಿ ಇದ್ದು ರಾಜಕೀಯ ಚಟುವಟಿಕೆ ಗರಿಗೆದರಿದೆ. ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಯುತ್ತಿದ್ದು, ಈ ನಡುವೆ ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ತಮ್ಮ ಹತ್ತು ವರ್ಷದ ಕೆಲಸದ ರಿಪೋರ್ಟ್ ಕಾರ್ಡ್ ಬಿಡುಗಡೆ ಮಾಡಿ ಮತ್ತೆ ಜನಾಶೀರ್ವಾದ ನೀಡುವಂತೆ ಮನವಿ ಮಾಡಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಚುನಾವಣೆಗೆ ಹೋಗಬೇಕಾದರೆ ಏನು ಮಾಡುತ್ತೇವೆ. ಅಧಿಕಾರದಲ್ಲಿ ಇದ್ದಾಗ ಏನು ಮಾಡಿದ್ದೇವೆ. 10 ವರ್ಷದಲ್ಲಿ ನಾನು ಕೆಲಸ ಮಾಡಿದ ರಿಪೋರ್ಟ್ ಕಾರ್ಡ್ ನೀಡಿದ್ದೇನೆ. ಪ್ರಧಾನಿ ಮೋದಿ ಕೊಟ್ಟಿದ್ದೇನು..? ಪ್ರತಾಪ್ ಸಿಂಹ ತಂದಿದ್ದೇನು..? ಅನ್ನೋ ಬುಕ್‌ಲೆಟ್ ಇದಾಗಿದೆ.  ಇದರಲ್ಲಿ ಕೇಂದ್ರದ ಡಿಪಾಲ್ಟ್ ಯೋಜನೆ ಪಟ್ಟಿ ಇಲ್ಲಿ ಮಾಡಿಲ್ಲ ಎಂದರು.

2014ರ ಹಿಂದೆ ಒಂದು ಟ್ರೈನ್ ಬಂದಿಲ್ಲ. ನಾನು 11 ಟ್ರೈನ್ ತಂದಿದ್ದೇನೆ.  12ನೇ ರೈಲು ಸದ್ಯದಲ್ಲೇ ಬರಲಿದೆ. ಮೈಸೂರು ರಾಮೇಶ್ವರಂ ರೈಲು ಬರಲಿದೆ. ಬೊಮ್ಮಾಯಿ ಯಡಿಯೂರಪ್ಪ ಸಿಎಂ ಆಗಿದ್ದಾಗ ಸಾಕಷ್ಟು ಅನುದಾನ ನೀಡಿದ್ದಾರೆ. ಮುಂದೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂ,  ಮೈಸೂರು-ಬೆಂಗಳೂರು ಮೆಟ್ರೋ ಬರಲಿದೆ. ಮೈಸೂರು ಚೆನೈ ಬುಲೆಟ್ ರೈಲು ಶೀಘ್ರವಾಗಿ ಆಗಲಿದೆ. ಹೀಗಾಗಿ ನಾನು ಮತ್ತೊಮ್ಮೆ ಆಶೀರ್ವಾದ ಕೇಳುತ್ತಿದ್ದೇನೆ ನಾನೊಬ್ಬ ಸಾಮಾನ್ಯ ಕಾರ್ಯಕರ್ತ. 2014, 2019ರಲ್ಲಿ ಗೆಲ್ಲಿಸಿದ್ದಾರೆ. ಸತತವಾಗಿ ಆಯ್ಕೆಯಾಗಿ ದಾಖಲೆ ಮಾಡಿದ್ದೇನೆ. ಪಕ್ಷ ಆಶೀರ್ವಾದ, ತೀರ್ಮಾನ ಮಾಡಿದರೆ ಜನರು ಆಶೀರ್ವಾದ ಮಾಡಲಿದ್ದಾರೆ ಎಂದು ಪ್ರತಾಪ್ ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular